ಪ್ರಮುಖ ಸುದ್ದಿ
ಕಾರ್ನಾಡ್ ನಿಧನಃ ಸರ್ಕಾರಿ ರಜೆ ಘೋಷಣೆ
ಕಾರ್ನಾಡ್ ನಿಧನಃ ಸರ್ಕಾರಿ ರಜೆ ಘೋಷಣೆ
ಬೆಂಗಳೂರಃ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ ನಿಧನ ಹಿನ್ನೆಲೆ ರಾಜ್ಯಾದ್ಯಂತ ಇಂದು ಶಾಲಾ ಕಾಲೇಜುಗಳು ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿದ ರಾಜ್ಯ ಸರ್ಕಾರ ಮತ್ತು ಮೂರು ದಿನಗಳವರೆಗೆ ಶೋಕಾಚರಣೆ ಮಾಡಲು ಆದೇಶಿಸಿದೆ.
ಕಳೆದ ಮೂರು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ನಾಡ್ ಇಂದು ಬೆಳಗ್ಗೆ ನಗರದ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ರಾಜ್ಯ ಆಡಳಿತ ಸುಧಾರಣೆ ಇಲಾಖೆ ಮತ್ತು ಸಿಬ್ಬಂದಿ 11:30 ರ ಸುಮಾರಿಗೆ ಅಧಿಕೃತ ರಜೆ ಘೋಷಣೆ ಮಾಡಿದೆ.