‘ಕರ್ನಾಟಕದಲ್ಲಿ ಗೂಂಡಾ ಸರ್ಕಾರದ ಆಡಳಿತವಿದೆ’!!!
ಸಿಎಂ ಸಿದ್ಧರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಕೊಪ್ಪಳ: ಮರಳು ಮಾಫಿಯಾ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದೆ. ನಮ್ಮ ರಾಜ್ಯದಲ್ಲಿ ಗೂಂಡಾ ಸರ್ಕಾರದ ಆಡಳಿತ ನಡೆಯುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಮೊದಲು ಸಿಎಂ ಸಿದ್ಧರಾಮಯ್ಯ ಅವರು ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಲಿ. ಗೂಂಡಾಗಳನ್ನು ದೂರ ಇಡಲಿ. ಮರಳು ಮಾಫಿಯಾಕ್ಕೆ ಕಡಿವಾಣ ಹಾಕಲಿ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದ ಆಡಳಿತ ನಡೆಸುವ ಬದಲು ಜಾತಿ ಸಂಘರ್ಷ ಹುಟ್ಟು ಹಾಕುತ್ತಿದ್ದಾರೆ. ಮೀನು ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗುತ್ತಾರೆ. ಅದನ್ನು ಪ್ರಶ್ನಿಸಿದರೆ ಬೇಡರ ಕಣ್ಣಪ್ಪನ ಉದಾಹರಣೆ ಬೇರೆ ಕೊಡ್ತಾರೆ. ಬೇಡರ ಕಣ್ಣಪ್ಪನ ಭಕ್ತಿ ಎಲ್ಲಿ , ಸಿದ್ಧರಾಮಯ್ಯನ ಭಕ್ತಿ ಎಲ್ಲಿ ಎಂದು ಪ್ರಶ್ನಿಸಿದ ಈಶ್ವರಪ್ಪ ಅವರು ಸಿದ್ಧರಾಮಯ್ಯ ಅವರೇ ನೀವು ಮಾತ್ರ ಕಣ್ಣು ಕಿತ್ತು ಹಾಕಿ ಬೇಡರ ಕಣ್ಣಪ್ಪನ ಭಕ್ತಿ ಪ್ರದರ್ಶನ ಮಾಡಬೇಡಿ. ಒಂದುಸಲ ಕಣ್ಣುಬಿಟ್ಟು ನೋಡಿ ಸಾಕು ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆ ನಡೆಯುತ್ತಿದೆ ಎಂದು ಕಿಡಿ ಕಾರಿದರು.