ರಾಜ್ಯದಲ್ಲಿ ʻಮುಂಗಾರುʼ ಅಬ್ಬರ : ಇಂದಿನಿಂದ 4 ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆ- ಹವಾಮಾನ ಇಲಾಖೆ
ಬೆಂಗಳೂರು : ಮುಂಗಾರು ಆಗಮನದ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದಿನಿಂದ ಮುಂದಿನ ನಾಲ್ಕು ದಿನ ಮುಂಗಾರು ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನ ಹಲವಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಕೂಡ ಭಾರಿ ಮಳೆಯಾಗಿದೆ. ಅಲ್ಲದೆ ಇತ್ತ ಮಹಾಲಕ್ಷ್ಮಿ ಲೇಔಟ್ ನ ಮಾರುತಿ ನಗರದ ಮುಖ್ಯ ರಸ್ತೆಯಲ್ಲಿ ಬೃಹತ್ ಮರ ಧರೆಗೊಳದಿದ್ದರಿಂದ ಕಾರಿನ ಮುಂಭಾಗ ಭಾಗಶಹ ಜಿತಮ್ಗೊಂಡಿದೆ ಚಾಲಕ ಕಾರು ನಿಲ್ಲಿಸಿ ತೆರಳಿದ ಬಳಿಕ ಮರ ಬಿದ್ದಿದ್ದರಿಂದ ದುರಂತ ಒಂದು ತಪ್ಪಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಬೆಂಗಳೂರಿನ ಹೊಸನಗರ, ಶಾಂತಿನಗರ, ಯಶವಂತಪುರ, ಹೆಬ್ಬಾಳ, ಮೆಜೆಸ್ಟಿಕ್, ರಾಜಾಜಿನಗರ ಬನಶಂಕರಿ ಸಿಟಿ ಮಾರ್ಕೆಟ್ ನಗರದ ಬಹುತೇಕ ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ ಮಳೆಯಲ್ಲಿ ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸಿದ ಘಟನೆ ನಡೆಯಿತು. ಮೆಜೆಸ್ಟಿಕ್ ರಾಜಾಜಿನಗರ ಮಲ್ಲೇಶ್ವರಂ, ಶಾಂತಿನಗರ, ವಿಧಾನಸೌಧ ಟೌನ್ ಹಾಲ್ ಕೆಆರ್ ಮಾರ್ಕೆಟ್ ಶಾಂತಿನಗರ, ವಿಧಾನಸೌಧ, ಕಾರ್ಪೊರೇಷನ್ ಶಿವಾಜಿನಗರ, ಜಯನಗರ, ಸದಾಶಿವನಗರ, ಹೆಬ್ಬಾಳ, ಯಲಹಂಕ ವಿಜಯನಗರ, ಮೈಸೂರು ರಸ್ತೆ, ಕೆಂಗೇರಿ, ಮಾಗಡಿ ರಸ್ತೆ, ಮಡಿವಾಳ, ಕೋರಮಂಗಲ, ಹೊಸೂರು ರಸ್ತೆ, ಕೆಆರ್ ಪುರಂ ಸೇರಿದೆ ಸುಸ್ತಮುತ್ತ ಧಾರಾಕಾರ ಮಳೆ ಆಯಿತು.ಮಳೆಯಿಂದ ರಸ್ತೆಗಳು ಜಲಾವೃತವಾಗಿದ್ದು ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮುಂದಿನ 4 ದಿನ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ 8 ಜಿಲ್ಲೆಗಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇಂದು ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.