ಬಸವಭಕ್ತಿ
ಸಂಭ್ರಮದ ಶ್ರೀರಾಮ ನವಮಿಃ ಪಾನಕ ವಿತರಣೆ
ಶಹಾಪುರದಲ್ಲಿ ಸಂಭ್ರಮದ ರಾಮ ನವಮಿ
ಯಾದಗಿರಿಃ ಜಿಲ್ಲೆಯ ಶಹಾಪುರದ ಜೀವೇಶ್ವರ ನಗರದ ಅರಳಿಕಟ್ಟಿಯ ಹನುಮಾನ್ ಮಂದಿರ ಆವರಣದಲ್ಲಿ ಸ್ವಕುಳ ಸಾಳಿ ಸಮಾಜದವತಿಯಿಂದ ರವಿವಾರ ಶ್ರೀರಾಮ ನವಮಿ ನಿಮಿತ್ತ ಶ್ರೀರಾಮ ತೊಟ್ಟಿಲೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಶ್ರೀರಾಮ ಭಾವಚಿತ್ರವನ್ನು ಹೂವಿನಿಂದ ಅಲಂಕರಿಸಲ್ಪಟ್ಟ ತೊಟ್ಟಿಲಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ ಮಹಿಳೆಯರು ಜೋಗುಳವಾಡಿದರು.
ಆಂಜನೇಯ ದೇವಸ್ಥಾನದ ಪ್ರತಿಮೆಗೆ ಪೂಜೆ ಸಲ್ಲಿಸಿದರು.
ಸಾರ್ವಜನಿಕರಿಗೆ ಸಿಹಿ ಪಾನಕ ಹಂಚುವ ಮೂಲಕ ಶ್ರೀರಾಮನನ್ನು ನೆನೆದರು.
ಸಾಮೂಹಿಕವಾಗಿ ಶ್ರೀರಾಮ ಜಪ ನೆರವೇರಿಸುವ ಮೂಲಕ ವಿಶೇಷ ಪ್ರಾರ್ಥನೆ ಸಲಳಿಸಿದರು. ಸಮಾಜದ ಯುವ ಮುಖಂಡರಾದ ರಾಹುಲ್ ಚಿಲ್ಲಾಳ, ಡಾ.ವೆಂಕಟೇಶ ಟೊಣಪೆ, ರಾಮಕೃಷ್ಣ ಚಿಲ್ಲಾಳ, ನಂದು ಚಿಲ್ಲಾಳ, ಸತೀಶ ಮಿರ್ಜಿ, ಸಂತೋಷ ಮಾನು, ಸಿದ್ದು ಶಿರವಾಳಕರ್, ಸಿದ್ದಣ್ಣ, ಮಲ್ಲು ಸೇರಿದಂತೆ ಹಿರಿಯರು ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.