ಪಾರದರ್ಶಕ ಕಸಾಪ ನಿರ್ಮಾಣದ ಗುರಿ – ಮುಲಾಲಿ

ಭ್ರಷ್ಟಾಚಾರ ಮುಕ್ತ, ಕಸಾಪದಲ್ಲಿ ಪಾರದರ್ಶಕತೆ ಕಾಣಲು ಮತ ನೀಡಿ
yadgiri, ಶಹಾಪುರಃ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪಾರದರ್ಶಕತೆ ಕಾಣಲು ಮತು ಭ್ರಷ್ಟಾಚಾರ ಮುಕ್ತತೆ ಸೇರಿದಂತೆ ಕಾಸಪ ಸಮರ್ಪಕ ಅಭಿವೃದ್ಧಿಗಾಗಿ ನಾಡಿನ ಒಳಿತಿಗಾಗಿ ಈ ಬಾರಿ ಕಸಾಪ ರಾಜ್ಯಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ನನಗೆ ಮತ ನೀಡುವ ಮೂಲಕ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಕಸಾಪ ರಾಜ್ಯಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಳ್ಳಾರಿಯ ಮಾಹಿತಿ ಹಕ್ಕು ಹೋರಾಟಗಾರ ರಾಜಶೇಖರ ಮುಲಾಲಿ ಮನವಿ ಮಾಡಿದರು.
ಕಸಾಪ ಚುನಾವಣೆ ಅಂಗವಾಗಿ ರಾಜ್ಯಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಮುಲಾಲಿ ಅವರು ನಗರಕ್ಕೆ ಸುಕ್ಷೇತ್ರ ಚರಬಸವೇಶ್ವರ ಸಂಸ್ಥಾನಕ್ಕೆ ಭೇಟಿ ನೀಡಿ ಶ್ರೀಮಠದ ಬಸಯ್ಯ ಶರಣರ ಆಶೀರ್ವಾದ ಪಡೆದು ಮತಯಾಚನೆ ಮಾಡಿದರು.
ಕಸಾಪ ಒಂದೇ ಸಮುದಾಯದ ಸ್ವತ್ತಾಗಿದೆ. ಅದನ್ನು ಸಮಾನತೆಯಡಿ ಪಾರದರ್ಶಕವಾಗಿ ನಿರ್ಮಾಣ ಮಾಡುವ ಗುರಿ ಹೊಂದಿದ್ದೇನೆ. ಕಸಾಪದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ವಾಸನೆ ಕಂಡು ಬಂದಿದ್ದು ಅದೆಲ್ಲವನ್ನು ಕಿತ್ತೆಸೆಯಬೇಕಿದೆ.
ಸಾಹಿತ್ಯ ವಿಭಾಗದಲ್ಲೂ ಸಾಕಷ್ಟು ತಾರತಮ್ಯಗಳನ್ನು ಕಂಡಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಕಸಾಪ ಸಾರಥ್ಯದ ಮರೀಚಿಕೆ ಎನ್ನುವಂತಾಗಿದೆ. ಈ ಭಾಗದಲ್ಲಿ ಒಂದು ಲಕ್ಷ ಜನ ಮತದಾರರಿದ್ದು, ಎಲ್ಲರೂ ಒಗ್ಗಟ್ಟಾಗಿ ಮತ ಚಲಾಯಿಸುವ ಮೂಲಕ ಅಪ್ಪಟ ಕನ್ನಡಿಗನಾದ ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹನುಮೇಶ ಉಪ್ಪಾರ, ನಾಡಗೌಡ, ಸ್ಥಳೀಯ ಯುವಕರಾದ ಮಂಜುನಾಥ ಚಟ್ಟಿ, ರಾಮು ತಹಸೀಲ್, ಭಾಗೇಶ ಸೇರಿದಂತೆ ಇತರರಿದ್ದರು. ಶ್ರೀಮಠದ ಬಸಯ್ಯ ಶರಣರು ಮುಲಾಲಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.