ಕಸಾಪ ನೂತನ ಅಧ್ಯಕ್ಷರಾಗಿ ಡಾ.ರವೀಂದ್ರನಾಥ ಹೊಸಮನಿ ನೇಮಕ
ಕಸಾಪ ನೂತನ ಅಧ್ಯಕ್ಷರಾಗಿ ಡಾ.ರವೀಂದ್ರನಾಥ ಹೊಸಮನಿ ನೇಮಕ
yadgiri, ಶಹಾಪುರಃ ಕಸಾಪ ಶಹಾಪುರ ನೂತನ ಸಾರಥಿಯಾಗಿ ಉಪನ್ಯಾಸಕ, ಸ್ನೇಹ ಜೀವಿ, ಗ್ರಾಮೀಣ ಪ್ರತಿಭೆ ಡಾ.ರವೀಂದ್ರನಾಥ ಹೊಸಮನಿ ಅವರನ್ನು ನೇಮಿಸಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಅವರು ಆದೇಶ ಹೊರಡಿಸಿದ್ದಾರೆ. ಕಳೆದ ವಾರ ನಗರದಲ್ಲಿ ನೂತನ ಕಸಾಪ ಅಧ್ಯಕ್ಷ ಆಯೆ ಸಭೆಯಲ್ಲಿ ಐವರು ತೀವ್ರ ಸ್ಪರ್ಧೆಯೊಡ್ಡಿದ ಕಾರಣ, ಜಿಲ್ಲಾಧ್ಯಕ್ಷರು, ತಮ್ಮ ಪದದತ್ತ ಅಧಿಕಾರ ಚಲಾಯಿಸಿ ಫೆ.14 ರಂದು ನೂತನ ಅಧ್ಯಕ್ಷರ ಹೆಸರು ಪ್ರಕಟಿಸುವೆ ಎಂದು ಭರವಸೆ ನೀಡಿದ್ದರು.
ಅದರಂತೆ ಸೋಮವಾರ ಫೆ.14 ಸಂಜೆ ಕಸಾಪ ಅದ್ಯಕ್ಷರನ್ನಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಡಾ.ರವೀಂದ್ರನಾಥ ಹೊಸಮನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸುವ ಮೂಲಕ ಹತ್ತು ಹಲವು ಗೊಂದಲಗಳಿಗೆ ಇತಿಶ್ರೀ ಹಾಡಿದ್ದಾರೆ.
ನೂತನ ಅಧ್ಯಕ್ಷರಿಗೆ ನಿಕಟಪೂರ್ವ ಕಸಾಪ ಅಧ್ಯಕ್ಷ ಸಿದ್ಲಿಂಗಪ್ಪ ಆನೇಗುಂದಿ, ದೇವಿಂದ್ರ ಹೆಗಡೆ, ಉಪನ್ಯಾಸಕಾರದ ದೇವಿಂದ್ರಪ್ಪ ಮಡಿವಾಳಕರ್ ಸೇರಿದಂತೆ ಸಾಹಿತಿಗಳು, ಯುವಕರು, ವಿದ್ಯಾರ್ಥಿಗಳು ಅಭಿನಂದನೆ ವ್ಯಕ್ತಪಡಿಸಿದ್ದಾರೆ.