ನಾನು “ಕನ್ನಡ ಪಂಥ”ದವನೂ ನನ್ನನ್ನು ಬೆಂಬಲಿಸಿ- ಡಾ.ಮಹೇಶ ಜೋಷಿ
ಕನ್ನಡ ಸಾಹಿತ್ಯ ಪರಿಷತ್ತಿನ 2021 ರಲ್ಲಿ ನಡೆಯುವ ಚುನಾವಣೆಯ ಪ್ರಚಾರ ಕೆಲವು ಜಿಲ್ಲೆಗಳಲ್ಲಿ, ನನ್ನ ಕೆಲವು ಸಹ ಸ್ಪರ್ಧಿಗಳು ಈಗಾಗಲೇ ಪ್ರಾರಂಭಿಸಿದ ಹಿನ್ನೆಲೆಯಲ್ಲಿ, ಕೆಲವು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾನ್ವಿತ ಸದಸ್ಯರು ನನಗೆ ದೂರವಾಣಿಯಲ್ಲಿ ಮಾತನಾಡಿ, ಒಂದು ಪಕ್ಷ ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದರೆ, ಯಾವ ಪಂಥದ ಕಡೆಗೆ ಹೋಗುತ್ತೀರಿ ಅಥವಾ ವಾಲುತ್ತೀರಿ ? ಎಡ ಪಂಥವೋ ಅಥವಾ ಬಲಪಂಥವೋ ಎಂದು ಕೇಳಿದರು. ಹಾಗಾಗಿ ಇದರ ಬಗ್ಗೆ ಸ್ಪಷ್ಟೀಕರಣ ನೀಡುವುದು ಹಾಗೂ ನನ್ನ ನಿಲುವನ್ನು ತಮಗೆಲ್ಲರಿಗೂ ತಿಳಿಸುವುದು ಅನಿವಾರ್ಯವಾಗಿದೆ.
“ನಾನು ಎಡಪಂಥದವನೂ ಅಲ್ಲ , ಬಲಪಂಥದವನೂ ಅಲ್ಲ. “ನೂರಕ್ಕೆ ನೂರು ಕನ್ನಡ ಪಂಥ” ದವನು. ಜೊತೆಗೆ ಎಲ್ಲ ಪಂಥಗಳ ಬುನಾದಿಯಾದ, “ಮಾನವ ಪಂಥ”ದ ಮೌಲ್ಯಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತೇನೆ.
ಸಾಹಿತ್ಯ, ಸಂಸ್ಕೃತಿ, ಕಲೆ ಕ್ರೀಡೆ, ಅನ್ನ , ನೀರು, ಗಾಳಿ , ಬೆಳಕು ಇವುಗಳಿಗೆ ಪಂಥದ ಬೇಲಿ ಅಥವಾ ಕಡಿವಾಣ ಹಾಕಬಹುದೇ? ಈ ನನ್ನ ನಿಲುವಿನ ಬಗ್ಗೆ ತಮ್ಮ ಅನಿಸಿಕೆಯನ್ನು, ಮುಕ್ತವಾಗಿ ದಯವಿಟ್ಟು ತಿಳಿಸಿ.
“ನನ್ನ ಅವಧಿಯಲ್ಲಿ ‘ದೂರದರ್ಶನ’- ‘ಸಮೀಪ ದರ್ಶನವಾಯಿತು’. ಮುಂದೆ ‘ಕನ್ನಡ ಸಾಹಿತ್ಯ ಪರಿಷತ್ತನ್ನು’
‘ಜನಸಾಮಾನ್ಯರ ಪರಿಷತ್ತನ್ನಾಗಿಸುವ ಧ್ಯೇಯ ನನ್ನದು’. ಈ ನಿಟ್ಟಿನಲ್ಲಿ ತಾವು ದಯವಿಟ್ಟು, ನನ್ನನ್ನು ಬೆಂಬಲಿಸಿ, ಪ್ರೋತ್ಸಾಹಿಸಿ ಹಾಗೂ ಆಶೀರ್ವದಿಸಿ”.
–ನಾಡೋಜ ಡಾ ಮಹೇಶ ಜೋಶಿ.
2021ರ ಚುನಾವಣೆಯಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ “ರಾಜ್ಯಾಧ್ಯಕ್ಷ” ಸ್ಥಾನದ ಸೇವಾಕಾಂಕ್ಷಿ.