ಕಾಂಗ್ರೆಸ್‍ನದು ಜಾತಿ ರಾಜಕಾರಣಃ ಸಂಸದ ನಳೀನಕುಮಾರ ಟೀಕೆ
ಯಾದಗಿರಿಃ ಕಾಂಗ್ರೆಸ್ ಮಹದಾಯ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಅಲ್ಲದೆ ದೀಪಕ್ ಕೊಲೆ ಪ್ರಕರಣದಲ್ಲಿ ಕೋಮು ಭಾವನೆ ಹುಟ್ಟಿಸಲು ಯತ್ನಿಸುತ್ತಿದೆ. ಇಬ್ಬಗೆ ನೀತಿ ಹೊಂದಿದ್ದ ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಮುಂದುವರೆಸಿದೆ ಎಂದು ಬಿಜೆಪಿಯ ಸಂಸದ ನಳೀನಕುಮಾರ ಟೀಕಿಸಿದರು.
ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಜಾತಿ ರಾಜಕಾರಣ ಮಾಡುತ್ತಿದೆ. ಕೋಮುವಾದಿ ತಾನೇ ಸೃಷ್ಠಿಸುತ್ತಿದ್ದು, ಬಿಜೆಪಿ ಮೇಲೆ ಹಾಕುತ್ತಿದೆ. ಕಾಂಗ್ರೆಸ್ ಹೀಗೆ ಮುಂದುವರೆದಲ್ಲಿ ತಕ್ಕ ಬೆಲೆ ತೆರಲಿದೆ. ಮತ್ತು ಮುಖ್ಯವಾಗಿ ಹೈದ್ರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ದೂರಿದರು.
ಅಲ್ಲದೆ ಮಹದಾಯಿ ಸಮಸ್ಯೆ ತುಂಬಾ ಹಳೇ ಸಮಸ್ಯೆ, ಮೋದಿಯವರ ಮಧ್ಯಸ್ಥಿಕೆಯಲ್ಲಿ ಮಹದಾಯಿ ವಿಚಾರ ಬಗೆಹರಿಸಲು ಪ್ರಯತ್ನ ನಡೆದಾಗ ಖರ್ಗೆಯವರ ನೇತೃತ್ವದಿಂದ ವಿಫಲವಾಗಿದೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.