ಪ್ರಮುಖ ಸುದ್ದಿ
BJP ರಾಜ್ಯಧ್ಯಕ್ಷ ಕಟೀಲುಗೆ ಕೊರೊನಾ ಸೋಂಕು ದೃಢ.!
BJP ರಾಜ್ಯಧ್ಯಕ್ಷ ಕಟೀಲುಗೆ ಕೊರೊನಾ ಸೋಂಕು ದೃಢ
ಮಂಗಳೂರಃ ಬಿಜೆಪಿ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲು ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಸಾಮಾಜಿಕಜಾಲ ತಾಣದಲ್ಲಿ ಬರೆದುಕೊಂಡ ಅವರು, ನಾನು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೇನೆ ವರದಿಯಲ್ಲಿ ಪಾಸಿಟಿವ್ ಬಂದಿರುವ ಕಾರಣ ವೈದ್ಯರ ಸಲಹೆ ಮೆರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ.
ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರು ಸುಚಿಸಿದಂತೆ ಚಿಕಿತ್ಸೆಗೆ ಒಳಗಾಗಿದ್ದೇನೆ. ನನ್ನ ಸಂಪರ್ಕ ದಲ್ಲಿದ್ದವರು ಎಲ್ಲರೂ ಜಾಗುರುಕರಾಗಿರಿ. ನಿಮ್ಮ ಶುಭಾಶಯಗಳು ಮತ್ತು ಆಶೀರ್ವಾದಗಳೊಂದಿಗೆ ಶೀಘ್ರದಲ್ಲಿ ಹಿಂತಿರುಗುವ ವಿಶ್ವಾಸವಿದೆ ಎಂದು ಅವರು ಬರೆದುಕೊಂಡಿದ್ದಾರೆ.