ಕಾವ್ಯಸಾಹಿತ್ಯ

ಕವಿಗಳಿಗಿರಲಿ ಸಾಮಾಜಿಕ ಜವಬ್ದಾರಿ-ಡಾ.ಕರಿಂ

ಕನ್ನಡ – ಸಂಸ್ಕೃತಿ ಇಲಾಖೆಯಿಂದ ಕವಿಗೋಷ್ಠಿ

ಯಾದಗಿರಿ,ಶಹಾಪುರಃ ಕವಿಗಳಾದವರು ಸಮಾಜದಲ್ಲಿರುವ ಓರೆ ಕೋರೆಗಳನ್ನು ಬರವಣಿಗೆಯ ಮೂಲಕ ತಿದ್ದುವ ಕೆಲಸ ಮಾಡುವುದರ ಜೊತೆಗೆ ಗೊಡ್ಡು ಸಂಪ್ರದಾಯಗಳ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಹಿರಿಯ ಸಾಹಿತಿ ಹಾಗೂ ಕನ್ನಡ ಉಪನ್ಯಾಸಕ ಡಾ.ಅಬ್ದುಲ್ ಕರೀಂ ಕನ್ಯಾಕೋಳೂರ ಹೇಳಿದರು.

ನಗರದ ಎಸ್.ಬಿ.ದೇಶಮುಖ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದಿನ ಯುವ ಜನತೆ ಮೊಬೈಲ್‍ನಿಂದ ದೂರ ಉಳಿದು ಓದು, ಬರವಣಿಗೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜ ಕಟ್ಟುವುದಕ್ಕೆ ಕಂಕಣಬದ್ಧರಾಗಿ ನಿಲ್ಲಬೇಕು. ಕವಿಗಳು ಎನಿಸಿಕೊಳ್ಳಲು, ಮನಬಂದಂತೆ ಸುಳ್ಳು ಸೊಗಡನ್ನು ಕ್ರೂಢಿಕರಿಸಿ ಸಂಪ್ರದಾಯಕ್ಕೆ ಜೋತುಬಿದ್ದು, ಸ್ವಾರ್ಥತೆಯಿಂದ ಕಾವ್ಯ ರಚಿಸಬೇಡಿ. ಸಾಮಾಜಿಕ ಜವಾಬ್ದಾರಿ ಕವಿಗಳಿಗೂ ಇದೆ ಎಂಬುದನ್ನು ಮರೆಯಬೇಡಿ. ತಮಗಾದ ಅನುಭವಗಳನ್ನು ಜನಮಾನಸಕ್ಕೆ ಹಾಗೂ ಸಮಾಜಕ್ಕೆ ತಿಳಿಯಬೇಕಾದರೆ, ಇಂತಹ ವೇದಿಕೆ ಅಗತ್ಯ ಎಂದರು.

ಖ್ಯಾತ ಕಥೆಗಾರ ಸಿದ್ಧರಾಮ ಹೊನ್ಕಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕವಿಗೋಷ್ಠಿಯಲ್ಲಿ 25 ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು.

ವಿಶೇಷವಾಗಿ ಭೀಮಪ್ಪ ಭಂಡಾರಿ ಇಂದಿನ ಗ್ರಾಮೀಣ ಭಾಗದ ಬದುಕಿನ ವಾಸ್ತವ ಸ್ಥಿತಿಗತಿಗಳ ಕುರಿತು ಕವನ ವಾಚಿಸಿದರು. ರಮೇಶ ಯಾಳಗಿ ರೈತರ ನೋವಿನ ಬಗ್ಗೆ ವಿವರಿಸಿದರೆ, ರಾಘವೇಂದ್ರ ಹಾರಣಗೇರಾ ಬಾಲ್ಯದ ನೆನಪುಗಳ ಬುತ್ತಿ ಬಿಚ್ಚಿಟ್ಟು ಋಣಾನು ಸಂಬಂಧಗಳ ಮೂಲಕ ಹಲವಾರು ಭಾವನಾತ್ಮಕ ಸಂಬಂಧಗಳನ್ನು ಕುರಿತು ವಿಶ್ಲೇಷಿಸಿದರು.

ಸಿ.ಎಸ್.ಭೀಮರಾಯ ಅವರು ಆಘಾತಕಾರಿಯಾಗಿ ಬೆಳೆಯುತ್ತಿರುವ ಮಹಾನಗರಗಳ ಕುರಿತು ಮನವರಿಕೆ ಮಾಡಿಕೊಟ್ಟರು. ರಾಜು ಕುಂಬಾರ ಅವರು ವಾಸ್ತವಿಕ ಸಮಾಜದ ಚಿಂತನೆಗಳ ಜೊತೆಗೆ ದೇವರು ಹುಡುಕುತ್ತಿರುವ ಹುಚ್ಚು ಮನಸ್ಸುಗಳ ಕುರಿತು ಕವನ ವಾಚಿಸಿದರು. ಶಂಕರ ಹುಲ್ಕಲ್ ಅವರು ಹೆಣ್ಣಿನ ಸೌಂದರ್ಯ, ಸೆಡವು, ಸಿಟ್ಟು, ಒನಪು, ವಯ್ಯಾರ ಗಳ ಕುರಿತು ಬಣ್ಣಿಸಿದರು.

ಎಸ್.ಬಿ.ದೇಶಮುಖ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವರಾಜ ದೇಶಮುಖ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಇತರರು ಉಪಸ್ಥಿತರಿದ್ದರು. ಶ್ಯಾಮಲಾ ಸಗರ ಪ್ರಾರ್ಥಿಸಿದರು, ಬಸವರಾಜ ಸಿನ್ನೂರ ನಿರೂಪಿಸಿದರು, ಮಹೇಶ ಪತ್ತಾರ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button