ದಾದರ್‍ನ ರಾಜಗೃಹ ಧ್ವಂಸ ಃ ಡಿಎಸ್‍ಎಸ್ ಪ್ರತಿಭಟನೆ
ದುಷ್ಕರ್ಮಿಗಳ ಬಂಧನಕ್ಕೆ ಡಿಎಸ್‍ಎಸ್ ಆಗ್ರಹ
yadgiri, ಶಹಾಪುರಃ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ವಾಸವಿದ್ದ ಮಹಾರಾಷ್ಟ್ರದ ದಾದರ್‍ನಲ್ಲಿರುವ ರಾಜಗೃಹದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಅಲ್ಲಿನ ಹೂವಿನ ಕುಂಡ ಸೇರಿದಂತೆ ಮನೆ ಧ್ವಂಸಗೊಳಿಸಿರುವದನ್ನು ಖಂಡಿಸಿ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಇಲ್ಲಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಡಾ.ಅಂಬೇಡ್ಕರ ವಾಸವಿದ್ದ ರಾಜಗೃಹವನ್ನು ಧ್ವಂಸಗೊಳಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸಿದ ಆರೋಪಿಗಳನ್ನು ಕೂಡಲೇ ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಬೇಕು. ಅಲ್ಲದೆ ರಾಷ್ಟ್ರಪತಿಗಳ ಮಧ್ಯಪ್ರವೇಶಿಸಿ ಇಂತಹ ಕಿಡಿಗೇಡಿಗಳಿಗೆ ಭಾರತದಿಂದ ಗಡಿಪಾರು ಮಾಡಬೇಕು.
ಸಮಾಜದ ಸ್ವಾಸ್ಥ್ಯ ಹದಗೆಡಿಸಲು ಯತ್ನಿಸುವ ಇಂತವರಿಗೆ ಕಠಿಣ ಶಿಕ್ಷೆಯಾಗಬೇಕು. ಅಲ್ಲದೆ ಈ ಕೃತ್ಯ ಪೂರ್ವ ನಿಯೋಜಿತವೇ ಅಥವಾ ಇದಕ್ಕೆ ಕಾರಣೀಭೂತರಾರು ಎಂಬುದನ್ನು ಸಮಗ್ರ ತನಿಖೆ ಮೂಲಕ ಬಯಲುಗೊಳಿಸಿ ಷಡ್ಯಂತರವನ್ನು ಹೊರಹಾಕಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಅಲ್ಲದೆ ಡಾ.ಬಾಬಾಸಾಹೇಬರ ವಾಸವಿದ್ದ ನಿವಾಸಕ್ಕೂ ಲಗ್ಗೆ ಹಾಕಿದ ಸಾಮಾಜಿಕ ದ್ರೋಹಿಗಳು ಪ್ರಜಾಪ್ರಭುತ್ವದ ವ್ಯವಸ್ಥೆಗೆ ದಕ್ಕೆ ಉಂಟು ಮಾಡುತ್ತಿದ್ದು, ಇದು ಅಶಾಂತಿಗೆ ಕಾರಣವಾಗಲಿದೆ. ಕಾರಣ ಮಹಾರಾಷ್ಟ್ರ ಸರ್ಕಾರ ತಕ್ಷಣವೇ ಕಿಡಿಗೇಡಿಗಳನ್ನು ಬಂಧಿಸುವ ಮೂಲಕ ದೇಶದ್ರೋಹಿಗಳಿಗೆ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿ ರಾಜ್ಯ ಉಪ ಸಂಚಾಲಕ ನಾಗಣ್ಣ ಬಡಿಗೇರ, ನಗರಸಭೆ ಸದಸ್ಯ ಶಿವಕುಮಾರ ತಳವಾರ, ಮುಖಂಡ ರಾಯಪ್ಪ ಸಾಲಿಮನಿ ಸೇರಿದಂತೆ ಇತರರು ಮಾತನಾಡಿದರು. ಹೊನ್ನಪ್ಪ ಗಂಗನಾಳ, ಮರೆಪ್ಪ ಕನ್ಯಾಕೋಳೂರ, ಮಹಾದೇವ ದಿಗ್ಗಿ, ಬಸವರಾಜ ಗುಡಿಮನಿ, ಮರೆಪ್ಪ ಜಾಲಿಬೆಂಚಿ, ದೇವಿಂದ್ರ ಗೌಡೂರ, ಬಸವರಾಜ ತಳವಾರ, ಶರಣರಡ್ಡಿ ಹತ್ತಿಗೂಡೂರ, ನಿಂಗಣ್ಣ ಹೊಸಮನಿ, ನಿಂಗಣ್ಣ ಅನಸಕೂಗೂರ, ಮಾಳಪ್ಪ ಸಲಾದಪೂರ, ಚಂದ್ರಶೇಖರ ಹತ್ತಿಗೂಡೂರ, ರಮೇಶ ಗೌಡೂರ. ಅಶೋಕ ತಳವಾರ. ಮಲ್ಲಿಕಾರ್ಜುನ ಸಕ್ಪಾಲ್, ಅನೀಲಕುಮಾರ ಇತರರಿದ್ದರು.