ಗಮನ ಸೆಳೆದ ಅಣ್ಣ-ತಂಗಿ, ರಸ್ತೆ ಬದಿ ಬಿರಿಯಾನಿ ಮಾರಾಟ.!
ಕೊರೊನಾ ಕಾರಣಃ ರಸ್ತೆ ಬದಿ ಬಿರಿಯಾನಿ ಮಾರಾಟ ಮಾಡುತ್ತಿರುವ ಅಣ್ಣ-ತಂಗಿ
ತಿರುವನಂತಪುರಂಃ ಕೊರೊನಾ ಮಹಾಮಾರಿ ಎಲ್ಲಡೆ ಹರಡಿ ದೊಡ್ಡ ದೊಡ್ಡ ಕಂಪನಿಗಳು ಸೇರಿದಂತೆ, ನಿತ್ಯ ದುಡಿದು ತಿನ್ನುವರು ಮತ್ತು ಹಲವಾರು ಕಂಪನಿಯಲ್ಲಿ ಖಾಸಗಿ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡಿದ್ದ ಹಲವರ ಪರಿಸ್ಥಿತಿ ನಿಜಕ್ಕೂ ಕರುಣಾಜನಕವಿದೆ.
ಉದಾಹರಣೆಗೆ ಶಿನಿಲ್ ಮತ್ತು ಆತನ ಸಹೊದರಿ ರಾಣಿ ಇಬ್ಬರು ಖಾಸಗಿ ಕೆಲಸ ಮಾಡುತ್ತಿದ್ದರು. ಇದೀಗ ಕೆಲಸ ಕೈತಪ್ಪಿರುವ ಕಾರಣ ಹೊಟ್ಟೆಪಾಡಿಗೆ ಏನಾದರು ಮಾಡಲೇಬೇಕು. ಹೀಗಾಗಿ ಅಣ್ಣ-ತಂಗಿ ಇಬ್ಬರು ರಸ್ತೆ ಬದಿ ನಿಂತು ಬಿರಿಯಾನಿ ಮಾರಾಟ ಮಾಡುತ್ತಿದ್ದಾರೆ.
ಬದುಕಲು ಏನಾದರೂ ಶ್ರಮವಹಿಸಲೇಬೇಕು.
ಇದೇನು ಕಳಂಕ ತರುವ ಉದ್ಯೋಗವಂತು ಅಲ್ಲ. ಆದರೆ ಗೊತ್ತಿರುವ ಕೆಲಸದಲ್ಲಿ ಇಷ್ಟು ವರ್ಷಗಳ ಕಾಲ ಶಿಸ್ತುಬದ್ಧ ಬದುಕು ನಡೆಸಿ ಇದೀಗ ಬೀದಿಯಲ್ಲಿ ಬಿರಿಯಾನಿ ಕೆಲಸ ಮಾಡುವದು ಸೋಜಿಗ ಎನಿಸಬಹುದು.
ಆದರೆ ಕೊರೊನಾ ಕಂಟಕ ತಂದ ಈ ಸ್ಥಿತಿ ಸಾಕಷ್ಟು ಜನರು ಅನುಭವಿಸುತ್ತಿದ್ದಾರೆ. ಆದರೆ ಈ ಸಹೋದರ ಸಹೋದರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.
ಮನೆಯಲ್ಲಿ ಶ್ರಮವಹಿಸಿ ಬಿರಾನಿ ಮಾಡಿ ಅದನ್ನು ತಂದು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಜೀವನ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಶ್ರಮಜೀವಿಗಳಿಗೆ ಎಲ್ಲರೂ ಬೆಂಬಲ ನೀಡಿ ಪ್ರೋತ್ಸಾಹಿಸಬೇಕು ಎಂದು ವಿನಯವಾಣಿ ಆಶಿಸುತ್ತದೆ.
ಬಿರಾನಿ ಮಾರಾಟ ಎರಡು ತಿಂಗಳಿಂದ ಆರಂಭಿಸಿದ್ದೇವೆ. ಕೊರೊನಾದಿಂದ ಹೊಟೇಲ್ ಎಲ್ಲ ಮುಚ್ಚಿರುವ ಕಾರಣ. ಇದು ಜನರಿಗೆ ಉತ್ತಮ ಆಯ್ಕೆಯಾಗಿದೆ.
-ಶಿನಿಲ್ ಕೇರಳ.