ಪ್ರಮುಖ ಸುದ್ದಿ
ಮೈಸೂರಲ್ಲಿ ಮಧ್ಯರಾತ್ರಿ ಕೆಜಿಎಫ್ ಚಿತ್ರ ಬಿಡುಗಡೆ
ಬೆಳಗಿನಜಾವ ಕೆಜಿಎಫ್ ಚಿತ್ರ ಬಿಡುಗಡೆ ಖಚಿತ.!
ಬೆಂಗಳೂರಃ ಮೈಸೂರ ನಗರದ ಡಿಆರ್ ಸಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಗುರುವಾರ ಮಧ್ಯರಾತ್ರಿಯಲ್ಲಿಯೇ ಕೆಜಿಎಫ್ ಚಿತ್ರ ಬಿಡುಗಡೆಯಾಗಲಿದೆ.
ಮತ್ತು ವಿಶ್ವಾದಾದ್ಯಂತ 2000 ಚಿತ್ರ ಮಂದಿರಗಳಲ್ಲಿ ಬೆಳಗಿನಜಾವ ಕೆಜಿಎಫ್ ರಿಲೀಸ್ ಆಗಲಿದೆ. ಈಗಾಗಲೇ ಮುಂಚಿತವಾಗಿ ಟಿಕೆಟ್ ಪಡೆದುಕೊಂಡ ಅಭಿಮಾನಿಗಳಾರು ಆತಂಕ ಪಡುವ ಅಗತ್ಯವಿಲ್ಲ.
ಬೆಳಗ್ಗೆ ಚಿತ್ರ ಮಂದಿರಕ್ಕೆ ತೆರಳಿ ಸಿನಿಮಾ ನೋಡುವಂತೆ ಚಿತ್ರ ನಿರ್ಮಾಪಕ ವಿಜಯ ಕಿರಗಂದೂರ ತಿಳಿಸಿದ್ದಾರೆ. ಮೈಸೂರ ನಗರದಲ್ಲಿ ಕೆಜಿಎಫ್ ಚಿತ್ರ ಮಧ್ಯರಾತ್ರಿಯಲಿ ರಿಲೀಸ್ ಆಗಲಿದೆ.
ರೌಡಿ ತಂಗಂ ಚಿರಿತ್ರೆ ಆಧಾರಿತ ಚಿತ್ರವಿದೆ ಎಂಬ ಹಿನ್ನೆಲೆ ಕೋರ್ಟ್ ನಿಂದ ತಡೆಯಾಜ್ಞೆ ಪಡೆಯಲಾಗಿದೆ. ಕೆಜಿಎಫ್ ಚಿತ್ರ ಬಿಡುಗಡೆಯಾಗಲ್ಲ ಎಂಬ ವದಂತಿ ಹಬ್ಬಿತ್ತು.
ಪ್ರಸ್ತುತ ಅದಕ್ಕೆಲ್ಲ ತೆರೆ ಎಳೆಯಲಾಗಿದ್ದು, ತಡೆಯಾಜ್ಞೆ ತರಲಿದ್ದಾರೆ ಎಂಬ ವಿಷಯ ಗೊತ್ತಿದ್ದೇ ನಾವು 15 ದಿವಸ ಮುಂಚಿತವಾಗಿ ಹೈಕೋರ್ಟ್ ನಲ್ಲಿ ಕೇವ್ಯಾಟ್ ಪಡೆಯಲಾಗಿದೆ.
ಹೀಗಾಗಿ ಅಭಿಮಾನಿಗಳಲ್ಲಿ ಆತಂಕ ಬೇಡ ಎಂದು ನಿರ್ಮಾಪಕ ವಿಜಯ್ ತಿಳಿಸಿದ್ದಾರೆ.