‘ಜಿತೇಗಾ ಭಾಯಿ ಜಿತೇಗಾ ವಿಕಾಸ್ ಹೀ ಜಿತೇಗಾ’ : ‘ವಿಕಾಸದ ಹುಚ್ಚಿ’ಗೆ ತಿರುಮಂತ್ರ ಹೇಳಿದ ಮೋದಿ
ದೆಹಲಿ: ‘ಜಿತೇಗಾ ಭಾಯಿ ಜಿತೇಗಾ ವಿಕಾಸ್ ಹೀ ಜಿತೇಗಾ’ ಈ ಘೋಷಣೆಗಳನ್ನು ಮೊಳಗಿಸಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ. ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಗೆದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ‘ಜಿತೇಗಾ ಭಾಯಿ ಜಿತೇಗಾ’ ಎಂದು ನಾನು ಹೇಳುತ್ತೇನೆ. ‘ವಿಕಾಸ್ ಹೀ ಜಿತೇಗಾ’ ಎಂದು ನೀವು ಹೇಳಿ ಎಂದು ಕಾರ್ಯಕರ್ತರಿಗೆ ಹೇಳುವ ಮೂಲಕ ‘ಜಿತೇಗಾ ಭಾಯಿ ಜಿತೇಗಾ ವಿಕಾಸ್ ಹೀ ಜಿತೇಗಾ’ ಘೋಷಣೆಯನ್ನು ಮೊಳಗಿಸಿದರು.
ಗುಜರಾತ್ ಚುನಾವಣ ವರ್ಷದಲ್ಲಿ ‘ವಿಕಾಸಕ್ಕೆ ಹುಚ್ಚು ಹಿಡಿದಿದೆ’ ಎಂಬ ಸ್ಲೋಗನ್ ಪಾಪುಲರ್ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ವಿಕಾಸದ ಮಂತ್ರವನ್ನು ವ್ಯಂಗ್ಯವಾಡಲಾಗಿತ್ತು. ‘ವಿಕಾಸಕ್ಕೆ ಹುಚ್ಚು ಹಿಡಿದಿದೆ’ ಎಂಬ ಹಾಡನ್ನು ಸಹ ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಅಲ್ಲದೆ ವಿಪಕ್ಷ ನಾಯಕರು ಸಹ ವಿಕಾಸಕ್ಕೆ ಹುಚ್ಚು ಹಿಡಿದಿದೆ ಎಂದು ಮೋದಿ ವಿರುದ್ಧ ವ್ಯಂಗ್ಯವಾಡಿದ್ದರು. ಹೀಗಾಗಿ, ಗುಜರಾತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಂದರ್ಭದಲ್ಲಿ ‘ವಿಕಾಸ್ ಹೀ ಜಿತೇಗಾ’ ಸ್ಲೋಗನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.