ಪ್ರಮುಖ ಸುದ್ದಿ
ಮರಕ್ಕೆ ಡಿಕ್ಕಿ ಹೊಡೆದ ಕಾರು ಐದು ಜನ ದುರ್ಮರಣ
ಮರಕ್ಕೆ ಡಿಕ್ಕಿ ಹೊಡೆದ ಕಾರು ಐದು ಜನ ದುರ್ಮರಣ
ಯಾದಗಿರಿಃ ರಸ್ತೆ ಬದಿಯ ಮರವೊಂದಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಐದು ಜನ ಸಾವನ್ನಪ್ಪಿ ಓರ್ವ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಗುಂಡಾಪುರ ಕ್ರಾಸ್ ಬಳಿ ಗುರುವಾರ ರಾತ್ರಿ ನಡೆದಿದೆ.
ಅಪಘಾತದಲ್ಲಿ ನಾಲ್ವರು ಸ್ಥಳದಲ್ಲಿ ಮೃತಪಟ್ಟಿದ್ದರೆ ಇನ್ನೋರ್ವ ಹೆಚ್ಷಿನ ಚಿಕಿತ್ಸೆಗಾಗಿ ಕಲಬುರ್ಗಿಗೆ ತೆರಳುವ ಮಾರ್ಗದಲ್ಲಿ ಸಾವನ್ನಪ್ಪಿದ್ದು, ಇನ್ನೋರ್ವನನ್ನು ಚಿಕಿತ್ಸೆಗಾಗಿ ಕಲಬುರ್ಗಿಗೆ ಕಳುಹಿಸಲಾಗಿದೆ. ಮೃತರನ್ನು ಶರಣಬಸವ ಅಂಗಡಿ (24) ಶರಣು ಕೊಡ್ಲಗಿ (24) ವಿಶ್ವನಾಥ್ ಘಂಟಿ (23) ಎಂದು ಗುರುತಿಸಲಾಗಿದ್ದು, ಮೃತರು ಶಹಾಪುರ ತಾಲೂಕಿನ ನಗನೂರ ಗ್ರಾಮದವರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಗೋಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.