ಪ್ರಮುಖ ಸುದ್ದಿ
ಹಿರಿಯ ನಟಿ ಖುಷ್ಬೂ ಕಾಂಗ್ರೆಸ್ ಗೆ ಗುಡ್ ಬೈ, ಬಿಜೆಪಿ ಸೇರ್ಪಡೆ ಸಾಧ್ಯತೆ.?
ಹಿರಿಯ ನಟಿ ಖುಷ್ಬೂ ಕಾಂಗ್ರೆಸ್ ಗೆ ಗುಡ್ ಬೈ, ಬಿಜೆಪಿ ಸೇರ್ಪಡೆ ಸಾಧ್ಯತೆ.?
ಚನ್ಯೈಃ ಖ್ಯಾತ ಹಿರಿಯ ನಟಿ ಖುಷ್ಬೂ ಸುಂದರ್ ಅವರು ರವಿವಾರ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರ ಬರೆದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದ ಖುಷ್ಬೂ ಕಳೆದ ವಾರದಿಂದಲೇ ಕಾಂಗ್ರೆಸ್ ತೊರೆಯುವ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆಗ ಈ ಕುರಿತು ಮಾಧ್ಯಮಕ್ಕೆ ಯಾವುದೇ ಸುಳಿವು ನಿಡಿರಲಿಲ್ಲ. ಇದೀಗ ಖುಷ್ಬೂ ಅವರು ಬಿಜೆಪಿ ಸೇರಲು ಸಿದ್ಧತೆ ನಡಸಿದ್ದಾರೆ ಎನ್ನಲಾಗಿದೆ.
ಅಲ್ಲದೆ ಅವರೊಂದಿಗೆ ಇನ್ನೋರ್ವ ಖ್ಯಾತಿ ಪಡೆದ ಐಆರ್ ಎಸ್ ಅಧಿಕಾರಿಯೊಬ್ಬರು ಬಿಜೆಪಿ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.