ಪ್ರಮುಖ ಸುದ್ದಿ
ಭಾರತ-ಚೀನಾ ನಡುವೆ ಮುಂದೆ ಏನಾಗಬಹುದು.? ಕೋಡಿಮಠದ ಶ್ರೀ ಭವಿಷ್ಯ ಏನಂತಿದೆ.?
ಭಾರತ-ಚೀನಾ ನಡುವೆ ಮುಂದೆ ಏನಾಗಬಹುದು.? ಕೋಡಿಮಠದ ಶ್ರೀ ಭವಿಷ್ಯ ಏನಂತಿದೆ.?
ವಿವಿಡೆಸ್ಕ್ಃ ಭಾರತ – ಚೀನಾ ನಡುವೆ ಸಮಸ್ಯೆ ಹೆಚ್ಚಾಗುತ್ತಿದೆ ಇನ್ನೇನು ಯುದ್ಧ ಸಂಭವಿಸುತ್ತದೆ ಎಂದು ಅಂದುಕೊಂಡು ಭಯಭೀತರಾಗುವ ಅಗತ್ಯವಿಲ್ಲ. ಯುದ್ಧ ಜರುಗುವದಿಲ್ಲ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ಕೋಡಿಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು ಈ ಚೀನಾ ಭಾರತದ ನಡುವೆ ಯುದ್ಧ ಸಂಭವಿಸುತ್ತದೆ ಎಂಬ ವಿಚಾರ ಕುರಿತು ತಮ್ಮ ಭವಿಷ್ಯ ನುಡಿದರು.
ಅಲ್ಲದೇ ಇದೆ ವೇಳೆ ಕೊರೊನಾ ಕುರಿತು ಕೇಳಿದ ಪ್ರಶ್ನೆಗೆ ಹಿಂದೆ ಸಾಕಷ್ಟು ಬಾರಿ ಹೇಳಿದ್ದೇನೆ.ಆದರೆ ಈಗ ಬರುವ ಹುಣ್ಣುಮೆ ಕಳೆದ ಬಳಿಕ ಮತ್ತೊಮ್ಮೆ ಎಲ್ಲವು ವಿಸ್ತಾರವಾಗಿ ಹೇಳುತ್ತೇನೆ ಎಂದರು.