ಪ್ರಮುಖ ಸುದ್ದಿ

ಸದೃಢ ಆರೋಗ್ಯಕ್ಕಾಗಿ ಕೆಓಎಫ್ ಉತ್ನನ್ನ ಬಳಸಿ-ಅತ್ತನೂರ

ಕೆಓಎಫ್ ಉತ್ಪನ್ನಗಳನ್ನು ಬಳಸಲು ಅತ್ತನೂರ ಕರೆ

ಯಾದಗಿರಿ, ಶಹಾಪುರಃ ಪ್ರಸಕ್ತ ದಿನಗಳಲ್ಲಿ ನಾವು ಪ್ರತಿಯೊಂದು ಆಹಾರ ಪದಾರ್ಥಗಳಲ್ಲಿ ಕಲಬೆರಿಕೆ ಕಾಣುತ್ತೇವೆ. ಆದರೆ ರಾಯಚೂರಿನ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಂಘಗಳ ಒಕ್ಕೂಟ ಉತ್ಪಾಧಿಸುವ ಖಾಧ್ಯ ತೈಲಗಳು ಹಾಗೂ ಆಹಾರ ಉತ್ಪನ್ನಗಳು ಪರಿಶುದ್ಧ, ಗುಣಮಟ್ಟದಿಂದ ಕೂಡಿವೆ. ಜನತೆ ಸದೃಢ ಆರೋಗ್ಯಕ್ಕಾಗಿ ಈ ಉತ್ಪನ್ನಗಳನ್ನು ಬಳಸಿ ಎಂದು ಕೆಓಎಫ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಮಹಾಂತೇಶ ಪಾಟೀಲ ಅತ್ತನೂರ ಕರೆ ನೀಡಿದರು.

ಸಮೀಪದ ಭೀಮರಾಯನ ಗುಡಿ ಕೃಷಿ ಮಹಾ ವಿದ್ಯಾಲಯ ಅಡಿಟೋರಿಯಂನಲ್ಲಿ ನಗರದ ಸಫಲ್ ಹೌಸ್‍ವತಿಯಿಂದ ಆಯೋಜಿಸಿದ್ದ ಉತ್ಪನ್ನಗಳ ಮೇಘಾ ಫೆಷ್ಟಿವಲ್ ಕೂಪನ್‍ಗಳ ಡ್ರಾ ಮಾಡುವ ಅದೃಷ್ಟಶಾಲಿ ವಿಜಯಿಗಳ ಆಯ್ಕೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕೆಓಎಫ್ ವ್ಯಾಪ್ತಿಯಲ್ಲಿ 5 ಜಿಲ್ಲೆಗಳು ಬರುತ್ತವೆ. ಅದರಲ್ಲಿ ಶಹಾಪುರ ಜನತೆ ಹೆಚ್ಚಾಗಿ ತೈಲವನ್ನು ಬಳಕೆ ಮಾಡುತ್ತಿರುವದು ಸಂತಸ ತಂದಿದೆ. ಕೆಓಎಫ್ ಉತ್ಪನ್ನಗಳನ್ನು ಖರೀಧಿಸುತ್ತಿರುವ ಗ್ರಾಹಕರಿಗೆ ಉತ್ತೇಜನ ನೀಡುವದೃಷ್ಟಿಯಿಂದ ನಾವು ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಕೂಪನಗಳ ಡ್ರಾ ಮಾಡುವ ಮೂಲಕ ಆಯ್ಕೆಯಾದವರಿಗೆ ಸೂಕ್ತ ಬಹುಮಾನಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.

ಕೆಓಎಫ್ ವ್ಯವಸ್ಥಾಪಕ ನಿರ್ಧೇಶಕ ಶಿವುಕುಮಾರ ಸ್ವಾಮೀ ಮಾತನಾಡಿ, ಕಳೆದ 15 ವರ್ಷಗಳಿಂದ ನಾವು ಇಲ್ಲಿ ಸಫಲ್ ಹೌಸ್ ಮುಖಾಂತರ ಜನರಿಗೆ ಅಗತ್ಯ ತೈಲ, ಆಹಾರ ಪದಾಥರ್ಗಳನ್ನು ಪೂರೈಸುತ್ತಿದ್ದೇವೆ. 2018-19ರಲ್ಲಿ ನಗರದಲ್ಲಿ ನಮ್ಮ ಸಫಲ್ ಹೌಸ್ 3 ಕೋಟಿ 26 ಲಕ್ಷ ವಹಿವಾಟು ನಡೆಸಿದೆ ಎಂದು ವಿವರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆಓಎಫ್ ರಾಯಚೂರ ಅಧ್ಯಕ್ಷ ಶಂಕ್ರಪ್ಪಗೌಡ ಪೋಲಿಸ್ ಪಾಟೀಲ್ ಬಳಿಚಕ್ರ ಮಾತನಾಡಿ, ಬರುವ ದಿನಗಳಲ್ಲಿ ಕೆಓಎಫ್ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಾರಾಟ ಮಳಿಗೆಗಳನ್ನು ಆರಂಭಿಸಿ ಜನತೆಗೆ ಉತ್ಪನ್ನಗಳನ್ನು ಪೂರೈಸಲಾಗುವದು ಎಂದರು.

ಕಾರ್ಯಕ್ರಮವನ್ನು ಯುವ ಮುಖಂಡ ಅಮರೇಶಗೌಡ ದರ್ಶನಾಪುರ ಉದ್ಘಾಟಿಸಿದರು. ವೇದಿಕೆ ಮೇಲೆ ಕಲಬುರಗಿ ಜಿಲ್ಲಾ ಸಹಕಾರಿ ಬ್ಯಾಂಕ್ ಮಾಜಿ ಅದ್ಯಕ್ಷ ಹಾಗೂ ಹಾಲಿ ನಿರ್ದೇಶಕ ಮಲ್ಲಣಗೌಡ ಕೌಳೂರ, ಬಾಪುಗೌಡ ಪಾಟೀಲ್, ಕೃಷಿ ಮಹಾ ವಿದ್ಯಾಲಯ ಡೀನ ಡಾ.ಆರ್.ಲೋಕೇಶ ಸಹಕಾರಿ ದುರೀಣರಾದ ಮಾಣಿಕರಡ್ಡಿ ಗೋಗಿ, ಮಲ್ಲಣಗೌಡ ಪಾಟೀಲ್, ಚಂದ್ರಶೇಖರಪ್ಪ, ಸುಧೀರ ಆಸ್ಪಲ್ಲಿ ಸೇರಿದಂತೆ ಇತರರು ಇದ್ದರು.

ಸಮಾರಂಭದಲ್ಲಿ ಡ್ರಾ ಮೂಲಕ ಆಯ್ಕೆಯಾದ ಅದೃಷ್ಟ ಶಾಲಿ ಒಟ್ಟು 125 ಗ್ರಾಹಕರಿಗೆ ವಿವಿಧ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಆರ್.ಜಿ.ಪಾಟೀಲ ಸ್ವಾಗತಿಸಿದರು. ಬಸವರಾಜ ಉಳ್ಳಾಗಡ್ಡಿ ನಿರೂಪಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button