ಜೀವ ಜಲಕ್ಕೆ ಗೌರವ ನೀಡುವುದು ನಮ್ಮ ಸಂಕಲ್ಪ: ಯೋಧ ದುರ್ಗಪ್ಪ
ಕೊಳವೆ ಬಾವಿಗೆ ನವ ವಧುವಿನಂತೆ ಶೃಂಗಾರ
ಕೊಳವೆ ಬಾವಿಗೆ ನವ ವಧುವಿನಂತೆ ಶೃಂಗಾರ
ಜೀವ ಜಲಕ್ಕೆ ಗೌರವ ನೀಡುವುದು ನಮ್ಮ ಸಂಕಲ್ಪ: ಯೋಧ ದುರ್ಗಪ್ಪ
yadgiri, ಶಹಾಪುರಃ ಜೀವ ಜಲವೆಂದೆ ಗೌರವಿಸುವ ನೀರು ಅತ್ಯಂತ ಮಹತ್ವÀದ ಸ್ಥಾನದಲ್ಲಿದ್ದು, ಪ್ರತಿಯೊಬ್ಬರು ನೀರಿನ ಸಂರಕ್ಷಣೆಯಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಎಂದು ವೀರಯೋಧ ದುರ್ಗಪ್ಪ ನಾಯಕ ಸಗರ ತಿಳಿಸಿದರು.
ನಗರದ ಹಳಪೇಟೆಯ ಶ್ರೀ ಈಶ್ವರ ದೇವಸ್ಥಾನದಲ್ಲಿ ನೂತನವಾಗಿ ಕೊಳವೆ ಭಾವಿ (ಬೋರವೆಲ್) ಅಳವಡಿಸುವ ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊಳವೆ ಬಾವಿಗೆ ನವವಧುವಿನಂತೆ ಶೃಂಗಾರ ಮಾಡಿ ದಂಪತಿಗಳಿಂದ ವಿಧಿವತ್ತಾಗಿ ಪೂಜೆ ನೆರವೇರಿಸಿರುವದು ಅತ್ಯಂತ ಮಹತ್ವದ ಕ್ಷಣ. ದರ್ಶನಾಪುರ ಅಭಿಮಾನಿ ಬಳಗ ಇಂತಹ ಸಮಾಜಮುಖಿ ಕಾರ್ಯ ಮಾಡವಲ್ಲಿ ಹೆಜ್ಜೆ ಹಾಕುತ್ತಿರುವದು ಭಗವಂತನ ಅವರಿಗೆ ಇನ್ನೂ ಹೆಚ್ಚಿನ ಪ್ರೇರಣೆ ನೀಡಲಿ ಎಂದು ಹಾರೈಸಿದರು.
ಬಡಾವಣೆಯ ಪ್ರಮುಖರಾದ ಡಾ.ಶಿವರಾಜ ದೇಶಮುಖ, ನಿಂಗು ದೇಶಮುಖ, ಮಲ್ಲೇಶಿ ಮಮದಾಪುರ, ಆಶ್ರಯ ಸಮಿತಿಯ ಮಾಜಿ ಅಧ್ಯಕ್ಷ ವಸಂತ ಸುರಪುರ, ಕೋನೇರಾಚಾರ್ಯ ಸಗರ, ಸಿದ್ಲಿಂಗಯ್ಯ ಗುರುವಿನ್, ಗುಂಡೇರಾವ ದೇಶಪಾಂಡೆ, ಅರ್ಚಕ ಶರಣಯ್ಯಸ್ವಾಮಿ, ನಾಗರಾಜ ಪತ್ತಾರ, ಸಣ್ಣಮಾನಯ್ಯ ಹಾದಿಮನಿ, ಕೃಷ್ಣಪ್ಪ ಬೋನೇರ, ಅಂಬ್ರೀಷ, ಹಯ್ಯಾಳಪ್ಪ, ನಿಂಗಪ್ಪ, ಜಮೀಲ, ಶೇಖಪ್ಪ, ದ್ಯಾವಣ್ಣ ಮಾಸ್ತರ, ಯಲ್ಲಪ್ಪ ವಗ್ಗನೋರ, ನಾಗಪ್ಪ ವಗ್ಗನೋರ, ಮಲ್ಲು ಯಂಕಂಚಿ, ಸೇರಿದಂತೆ ಬಡಾವಣೆಯ ಪ್ರಮುಖರು ಇದ್ದರು.