ಪ್ರಮುಖ ಸುದ್ದಿ

ಈ ಕೋಣದ ಬೆಲೆ 23 ಕೋಟಿ ಅಂತದ್ದೇನಪ್ಪಾ ಎಂದು‌ ಹುಬ್ಬೇರಿಸಬೇಡಿ.! ಇನ್ನೂ ಇದರ ತೂಕವೆಷ್ಟು ಗೊತ್ತಾ.?

ಈ ಕೋಣದ ಹೆಸರು ಅನ್ನೋಲ್ ಇದರ ನಿಖರ ಬೆಲೆ ಎಷ್ಟು ಗೊತ್ತಾ.?

ಈ ಕೋಣದ ಬೆಲೆ 23 ಕೋಟಿ ಅಂತದ್ದೇನಪ್ಪಾ ಎಂದು‌ ಹುಬ್ಬೇರಿಸಬೇಡಿ.! ಇನ್ನೂ ಇದರ ತೂಕವೆಷ್ಟು ಗೊತ್ತಾ.?

ಚಂಡೀಗಢಃ ಹರಿಯಾಣದಲ್ಲಿರುವ ಈ ವಿಶೇಷತೆ ಹೊಂದಿದ ಕೋಣದ ಹೆಸರು “ಅನ್ನೋಲ್”
ಇದರ ಹೆಸರನ್ನು ಅದರ ಮಾಲೀಕನೇ ಇಟ್ಟಿರುವದು.

ಹೆಸರಿಗೆ ತಕ್ಕಂತೆ ಇದು ಅತ್ಯಂತ ವಿಶಿಷ್ಟವಾದ ಕೋಣವಾಗಿದ್ದು, ಇತ್ತೀಚಿನ ಎರಡು ಪ್ರಮುಖ ಮೇಳಗಳಲ್ಲಿ ಇದು ಭಾಗವಹಿಸಿದ್ದು ಇದೀಗ ಅನ್ನೋಲ್ ರಾಷ್ಟ್ರವ್ಯಾಪಿ ಸುದ್ದಿಯಾಗಿದೆ.

ಪುಷ್ಕ‌ರ್ ಹಾಗೂ ಮೀರತ್‌ನಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಕೃಷಿ ಮೇಳದಲ್ಲಿ ಸುಮಾರು 1500 ಕೆ.ಜಿ. ತೂಗುವ ಸುರ್ತಿ ತಳಿಯ “ಅನ್ನೋಲ್” ಹೆಸರಿನಿಂದ ಕರೆಯಿಸಿಕೊಳ್ಳುವ ಈ ಕೋಣ ಎಲ್ಲರ ಗಮನ ಸೆಳೆದಿತ್ತು. ಸಾಮಾಜಿಕ ಮಾಧ್ಯಮದಲ್ಲೂ ಇದರದ್ದೇ ಸುದ್ದಿ.

ತನ್ನ ನೆಚ್ಚಿನ ಅನ್ನೋಲ್‌ಗೆ ದುಬಾರಿ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವ ಅದರ ಮಾಲೀಕ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕೋಣಕ್ಕೆ ನಿತ್ಯ ನೀಡುವ ಆಹಾರದ ಪಟ್ಟಿಯನ್ನು ಕೇಳಿದ ಪ್ರತಿಯೊಬ್ಬರ ಹುಬ್ಬೇರುವಂತೆ ಮಾಡಿದೆ.

ಅನ್ನೋಲ್‌ನ ಆರೋಗ್ಯವಂತ ಜೀವನ ಶೈಲಿಗಾಗಿ ನಿತ್ಯ 250 ಗ್ರಾಂ ಬಾದಾಮಿ, 30 ಬಾಳೆಹಣ್ಣು, 4 ಕೆ.ಜಿ. ದಾಳಿಂಬೆ, 5 ಕೆ.ಜಿ. ಹಾಲು ಹಾಗೂ 20 ಮೊಟ್ಟೆ ನೀಡಲಾಗುತ್ತಿದೆಯಂತೆ. ಇಷ್ಟು ಮಾತ್ರವಲ್ಲ, ಹಿಂಡಿ, ಹಸಿರು ಮೇವು, ತುಪ್ಪ, ಸೋಯಾಬೀನ್ ಹಾಗೂ ಮೆಕ್ಕೆಜೋಳವನ್ನೂ ನೀಡಲಾಗುತ್ತಿದೆ.
ಆ ಮೂಲಕ ಸಂತಾನೋತ್ಪತ್ತಿ ಮತ್ತು ಮೇಳಗಳಲ್ಲಿ ಪ್ರದರ್ಶನ ನೀಡಲು ಅನ್ನೋಲ್ ಸದಾ ಸಿದ್ಧವಿರುತ್ತದೆ ಎನ್ನುವುದು ಅದರ ಮಾಲೀಕ ಮಾಹಿತಿ ನೀಡಿದ್ದಾನೆ.

ನಿತ್ಯ ಎರಡು ಬಾರಿ ಮಜ್ಜನ. ಇದಕ್ಕಾಗಿ ಬದಾಮಿ ಹಾಗೂ ಸಾಸಿವೆ ಎಣ್ಣೆ ಬೆರೆಸಿದ ವಿಶೇಷ ತೈಲವನ್ನು ಬಳಸಲಾಗುತ್ತದೆ ಎಂದು ಅದರ ಮಾಲೀಕ ಗಿಲ್ ವಿವರಿಸಿರುವುದಾಗಿ ಈಚೆಗೆ ಎನ್‌ಡಿಟಿವಿ ವರದಿ ಮಾಡಿದೆ.

ಮಗನನ್ನು ಸಾಕಲು ತಾಯಿ, ಸೋದರಿಯನ್ನು ಮಾರಿದ ಗಿಲ್ ಕೋಣದ ಸಾಕಾಣಿಕೆ ವೆಚ್ಚವನ್ನು ಸರಿದೂಗಿಸುವ ಸಲುವಾಗಿ ನಿತ್ಯ 25 ಲೀಟರ್ ಹಾಲು ಕೊಡುತ್ತಿದ್ದ ಅನ್ನೋಲ್‌ನ ತಾಯಿ ಹಾಗೂ ಸೋದರಿ ಎಮ್ಮೆಗಳನ್ನು ಮಾರಿದ್ದಾರೆ.

*ಅನ್ನೋಲ್ ವೀರ್ಯದಾನ*- *ತಿಂಗಳಿಗೆ 5 ಲಕ್ಷ ಲಾಭ*

ವಾರಕ್ಕೆ ಎರಡು ಬಾರಿ ಅನ್ನೋಲ್ ವೀರ್ಯ ದಾನ
ಮಾಡುತ್ತದೆ. ಇದರ ವೀರ್ಯಕ್ಕೆ ಸಾಕಷ್ಟು ಬೇಡಿಕೆ ಇದೆಯಂತೆ. ಒಂದು ಬಾರಿ ಸಂಗ್ರಹವಾಗುವ ವೀರ್ಯದಿಂದ ನೂರಕ್ಕೂ ಹೆಚ್ಚು ಎಮ್ಮೆಗಳಿಗೆ ಬಳಸಬಹುದಾಗಿದೆ. ಇದರಿಂದಾಗಿ ಮಾಸಿಕ ಗಿಲ್‌ ಕುಟುಂಬಕ್ಕೆ ಅನ್ನೋಲ್‌ನಿಂದಾಗಿ ₹4 ಲಕ್ಷದಿಂದ ₹5 ಲಕ್ಷದವರೆಗೆ ನಿರ್ದಿಷ್ಟ ಆದಾಯ ತಂದು ಕೊಡುತ್ತಿದೆ. ಇದರಿಂದಲೂ ಇದರ ನಿರ್ವಹಣೆ ಸಾಧ್ಯವಾಗುತ್ತಿದೆ ಎಂದು ಗಿಲ್ ತಿಳಿಸಿರುವುದಾಗಿ ವರದಿಯಾಗಿದೆ.

ಸಾಕಷ್ಟು ಜನರು ಅನ್ನೋಲ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಸದ್ಯ ಇದರ ಬೆಲೆ ₹23 ಕೋಟಿ ವರೆಗೂ ತಲುಪಿದೆ. ಆದರೆ ಅನ್ನೋಲ್‌ ನಮ್ಮ ಕುಟುಂಬದ ಸದಸ್ಯ. ಹೀಗಾಗಿ ಇದನ್ನು ಮಾರುವ ಯಾವುದೇ ಇರಾದೆ ಇಲ್ಲ ಎನ್ನುತ್ತಾರೆ ಗಿಲ್.

Related Articles

Leave a Reply

Your email address will not be published. Required fields are marked *

Back to top button