ಕೋಣಕ್ಕಾಗಿ ಎರಡು ಗ್ರಾಮಗಳ ನಡುವೆ ಕಾದಾಟ.!
ವಿವಿ ಡೆಸ್ಕ್ಃ ಕೋಣವೊಂದನ್ನು ದಾವಣಗೇರಾ ಜಿಲ್ಲೆಯ ಹಾರನಹಳ್ಳಿ ಗ್ರಾಮಸ್ಥರು ಕಟ್ಟಿಹಾಕಿರುವ ಹಿನ್ನೆಲೆ ಬೇಲಿಮಲ್ಲೂರ ಗ್ರಾಮಸ್ಥರು ಗರಂ ಆಗಿದ್ದು ಎರಡು ಗ್ರಾಮಗಳ ನಡುವೆ ಇದೀಗ ಕೋಣಕ್ಕಾಗಿ ಹಗ್ಗಜಗ್ಗಾಟ ಶುರುವಾಗಿದೆ. ಹೀಗಾಗಿ ಎರಡು ಗ್ರಾಮಗಳಲ್ಲಿ ಪಕ್ಷುಬ್ಧ ವಾತಾವರಣ ಉಂಟಾಗಿದ್ದು ಕೋಣಕ್ಕಾಗಿ ಕಾದಾಟವೇ ಶುರುವಾಗಿದೆ ಎನ್ನಬಹುದು.
ಯಾವದೀ.. ಕೋಣ ಯಾಕೆ ಕಾದಾಟ.?
ದಾವಣಗೇರಾ ಜಿಲ್ಲೆಯ ಹಾರನಹಳ್ಳಿ ಗ್ರಾಮಸ್ಥರು ಕಟ್ಟಿಹಾಕಿರುವ ಕೋಣ ಮಾರಿಕಾಂಬ ದೇವಿಗೆ ಬಿಟ್ಟಿರುವದ್ದಾಗಿದೆ ಎಂಬುದು ಶಿವಮೊಗ್ಗ ಜಿಲ್ಲೆಯ ಬೇಲಿಮಲ್ಲೂರ ಗ್ರಾಮಸ್ಥರ ವಾದವಾಗಿದೆ. ದೇವಿ ಕೋಣವಿದೆ ಅದನ್ನು ಬಿಟ್ಟು ಬಿಡಿ ಎಂಬುದು ಬೇಲಿಮಲ್ಲೂರ ಗ್ರಾಮಸ್ಥರ ಆಗ್ರಹ.
ಆದರೆ, ಹಾರನಹಳ್ಳಿ ಗ್ರಾಮಸ್ತರು ಇದನ್ನು ತಳ್ಳಿ ಹಾಕಿದ್ದಾರೆ. ಬೇಲಿಮಲ್ಲೂರ ಗ್ರಾಮಸ್ಥರ ಹೇಳಿಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಎರಡು ಗ್ರಾಮಗಳ ಮಧ್ಯೆ ಈಗ ಕೋಣಕ್ಕಾಗಿ ಕಾದಾಟ ನಡೆದಿದೆ. ಬೇಲಿಮಲ್ಲೂರ ಗ್ರಾಮಸ್ಥರು ಕೋಣ ದೇವಿಗೆ ಬಿಟ್ಟಿರುದಾಗಿದೆ ಅದು ನಮ್ಮೂರಿನ ಕೋಣ ಅದನ್ನು ಹಾರನಹಳ್ಳಿ ಗ್ರಾಮಸ್ಥರು ಕಟ್ಟಿಹಾಕಿದ್ದಾರೆ ಕೂಡಲೇ ಅದನ್ನು ಬಿಡಿಸಿಕೊಡಿ ಎಂದು ಠಾಣೆ ಮೆಟ್ಟಿಲೇರಿದೆ.
ಕೋಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೊಂದು ವಿಚಿತ್ರ ಪ್ರಕರಣವಾಗಿದ್ದು, ಪೊಲೀಸರಿಗೆ ತಲೆ ನೋವಾಗಿದೆ ಎಂದು ಹೇಳಲಾಗುತ್ತಿದೆ.
ಕೋಣ ಬಲಿ.?
ಈ ಕೋಣ ನಿಜವಾಗಲೂ ಯಾವ ಗ್ರಾಮದ್ದು, ಯಾವ ಗ್ರಾಮದಲ್ಲಿ ಕೋಣವನ್ನು ಬಲಿ ಕೊಡುತ್ತಿದ್ದಾರೆ..? ಎಂಬುದು ಸ್ಪಷ್ಟವಾಗಿ ತಿಳಿಯಬೇಕಿದೆ. ಎರಡು ಗ್ರಾಮದವರು ಕೋಣ ನಮ್ಮದೆ ಎನ್ನುವಂತಾದರೆ, ನಿಜಕ್ಕೂ ಕೋಣ ಯಾರದು.ಎಲ್ಲಿಂದ ತರಲಾಗಿದೆ.
ಸದ್ಯ ಕೋಣ ಬಲಿ ಕೊಡಲು ಮುಂದಾದ ಗ್ರಾಮ ಯಾವುದು..? ಎಲ್ಲವೂ ಅಯೋಮಯ. ಅಲ್ಲದೆ ಪೊಲೀಸರ ಮಧ್ಯ ಪ್ರವೇಶಕ್ಕೆ ಎರಡು ಗ್ರಾಮಗಳು ಸಹ ಆಗ್ರಹಿಸುತ್ತಿವೆ. ನಿಜಕ್ಕೂ ಕೋಣ ಯಾವ ಗ್ರಾಮದ್ದು ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ. ದೇವಿಗೆ ಬಿಟ್ಟ ಕೋಣ ಇದಾಗಿದೆಯೇ.? ಇದೆಲ್ಲವನ್ನು ಪತ್ತೆ ಹಚ್ಚಬೇಕಿದೆ.
ಎರಡು ಗ್ರಾಮಗಳ ನಡುವೆ ಘರ್ಷಣೆಯಾಗದಂತೆ ಪೊಲೀಸರು ಮಧ್ಯಸ್ಥಿಕೆವಹಿಸಿ ಈ ಪ್ರಕರಣವನ್ನು ಬೇಧೀಸಬೇಕಿದೆ. ಇದು ವಿಚಿತ್ರ ಪ್ರಕರಣವಾಗಿದೆ ಎಂದು ಹೇಳಬಹುದು.