ಪ್ರಮುಖ ಸುದ್ದಿ

ಕೊರೊನಾ ಭೀತಿ ಹೋಗಲಾಡಿಸಲು ಜನಪ್ರತಿನಿಧಿಗಳೇಕೆ ಧಾವಿಸುತ್ತಿಲ್ಲ.? -ಆಂದೋಲಾ ಶ್ರಿ ಆಕ್ರೋಶ

ಕೊರೊನಾ ಭೀತಿ ಹೋಗಲಾಡಿಸಲು ಜನಪ್ರತಿನಿಧಿಗಳೇಕೆ ಧಾವಿಸುತ್ತಿಲ್ಲ.? -ಆಂದೋಲಾ ಶ್ರಿ ಆಕ್ರೋಶ

ವಿವಿ‌ಡೆಸ್ಕ್ಃ ‌ಕೊರೊನಾ ವೈರಸ್ ಅಥವಾ ಕೋವಿಡ್ 19 ಸೋಂಕು ಜಗತ್ತಿನಾದ್ಯಂತ ತಲ್ಲಣ ಮೂಡಿಸಿದೆ. ದೇಶದಲ್ಲಿ ಕಲಬುರ್ಗಿಯಲ್ಲಿಯೇ ಕೊರೊನಾ ಮೊದಲ ಮರಣ ಮೃಂದಗ ಬಾರಿಸಿದ್ದು, ಜನರು ಭಯ ಭೀತರಾಗಿದ್ದಾರೆ ಆದರೆ ಜನಪ್ರತಿನಿಧಿಗಳಾರು ಕಲಬುರ್ಗಿಗೆ ಬಾರದೆ ಕುಳಿತಲ್ಲಿಂದಲೇ ಕೆಲವರು ಪೇಪರ್ ಸ್ಟೇಟಮೆಂಟ್ ಕೊಟ್ಟು ಸುಮ್ಮನಾದರೆ ಇನ್ನೂ ಕೆಲವರು ಜನರತ್ತ ನಗರದತ್ತ ಸುಳಿಯುತ್ತಿಲ್ಲ ಸಾಮಾಜಿಕ‌ ಕಳಕಳಿ ಇಲ್ಲದ ಜನಪ್ರತಿನಿಧಿಗಳಿವರು ಎಂದು ಶ್ರೀರಾಮ ಸೇನೆಯ ರಾಜ್ಯಧ್ಯಕ್ಷ ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಕೊರೊನಾ ಭಯದಿಂದ ಜಿಲ್ಲೆಗೆ ಬರಲಾಗುವದಿಲ್ಲ ಎಂಬ ಹೇಳಿಕೆಯನ್ನು ಕೊಡುತ್ತಾರೆ ಅಂದ್ರೇ ಇವರನ್ನ ಜನಸೇವಕರು, ನಾಯಕರು ಎನ್ನಬೇಕೆ ಎಂದು ಕಿಡಿಕಾರಿದರು.

ಕೋವಿಡ್ 19 ಅಣುಬಾಂಬ್ ಇದ್ದಂತೆ, ಜಿಲ್ಲೆಯ ಜನಪ್ರತಿನಿಧಿಗಳು ಕೂಡಲೆ ಜಿಲ್ಲೆಗೆ ಧಾವಿಸಬೇಕು. ನಗರದ ಜನರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಹೆಚ್ಚಾಗಿ ವೈರಸ್ ಹರಡದಂತೆ ಎಚ್ಚರಿಕೆವಹಿಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.

ಮತ್ತು ಜಿಲ್ಲಾಧಿಕಾರಿ ಶರತ್ ಬಿ.‌ ಅವರು ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳುತ್ತಿರುವದು ಸ್ವಾಗತಾರ್ಹವಾಗಿದೆ.
ಕ್ಷೇತ್ರದ ಜನತೆ ಸಂಕಷ್ಟದಲ್ಲಿ ಇದ್ದಾಗಲೂ ಜನಪ್ರತಿನಿಧಿಗಳು ಸಿನಮಾ ನಟರನ್ನು ಭೇಟಿಯಾಗಿ ಅವರ ಜೊತೆ ಫೋಟು ತೆಗೆದುಕೊಳುತ್ತಿದ್ದಾರೆ. ಇದು ಸಾಮಾಜಿಕ‌ ಜಾಲ ತಾಣದಲ್ಲಿ ಹಂಚಿಕೊಳ್ಳುತ್ತಿರುವದು‌‌ ನಾಚಿಕೆಗೇಡು. ಇಂತಹ ಜನ ಪ್ರತಿನಿಧಿಗಳು ಏಕೇ ಬೇಕು ಎಂದು‌ ಪ್ರಶ್ನಿಸಿದರು.

Related Articles

Leave a Reply

Your email address will not be published. Required fields are marked *

Back to top button