ಉಚಿತ ಅನ್ನ, ನೀರು ವಿತರಣೆಗೆ ಸಿಪಿಐ ಹನುಮರಡ್ಡೆಪ್ಪ ಚಾಲನೆ
ಸಮಿತಿ ಕಾರ್ಯ ಚಟುವಟಿಕೆ ಸಿಪಿಐ ಹನುಮರಡ್ಡೆಪ್ಪ ಶ್ಲಾಘನೆ
ಶಹಾಪುರಃ ಕೊರೊನಾ ಹಾವಳಿಯಿಂದ ತತ್ತರಿಸಿದ ಊರಿಗೆ ಮರಳುತ್ತಿರುವ ವಲಸಿಗರಿಗೆ ಮತ್ತು ಸೇವಾನಿರತ ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸೇರಿದಂತೆ ಅಮಾಯಕರಿಗೆ ನಿರಾಶ್ರಿತ ಬಡವರಿಗೆ ಭೀಕ್ಷುಕರಿಗೆ ಅನ್ನ, ನೀರು ವಿತರಿಸುವ ನಾಗರಿಕ ಹೋರಾಟ ಸಮಿತಿ ಕಾರ್ಯ ಶ್ಲಾಘನೀಯ ಎಂದು ಸಿಪಿಐ ಹನುಮರಡ್ಡೆಪ್ಪ ತಿಳಿಸಿದರು.
ನಗರದ ಜೀವೇಶ್ವರ ಕಲ್ಯಾಣ ಮಂಟಪದ ಮುಂದೆ ಅನ್ನ, ನೀರು ವಿತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೊನಾ ತೀವ್ರಗತಿಯಲ್ಲಿ ಹರಡುತ್ತಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಯುವಕರು ಜಾಗರೂಕತೆಯಿಂದ ಇರಬೇಕು. ಅಮಾಯಕರಿಗೆ, ಹಸಿದು ಬಂದವರಿಗೆ ಅನ್ನ ದೊರೆಯದಎ ಪರಿತಪಿಸುತ್ತಿರುವರಿಗೆ ಅನ್ನ ನೀರು ನೀಡುವದು ಉತ್ತಮ ಕಾರ್ಯ.
ಮನುಷ್ಯ ಮನುಷ್ಯರಿಗೆ ನೆರವಾಗದೇ ಹೋದಲ್ಲಿ ನಾವೆಷ್ಟೆ ಗಳಿಸಿದ್ದರೂ ಅದಕ್ಕೇನು ಅರ್ಥವಿರಲ್ಲ. ಕೊರೊನಾ ತಡೆಗಾಗಿ ಹಗಲಿರಳು ಶ್ರಮಿಸುತ್ತಿರುವ ನಮ್ಮೆಲ್ಲ ಸಿಬ್ಬಂದಿಗೆ ಸಹಕಾರ ನೀಡುತ್ತಿರುವರೆಲ್ಕರಿಗೂ ಧನ್ಯವಾದಗಳು.
ಜೊತೆಗೆ ಯಾರೊಬ್ಬರಿಗೂ ಹೊರಗಡೆ ಬಾರದಂತೆ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರು ದೇಶದ ಸ್ಥಿತಿ ಏನಿದೆ ಎಂಬುದನ್ನು ಅರಿತು ನಡೆಯಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಭೀ.ಗುಡಿ ಪಿಎಸ್ಐ ರಾಜಕುಮಾರ ಜಾಮಗೊಂಡ ಉಪಸ್ಥಿತರಿದ್ದರು. ಸಮಿತಿ ಮುಖಂಡರಾದ ರಾಜಕುಮಾರ ಚಿಲ್ಲಾಳ, ಮಾಜಿ ನಗರಸಭೆ ಅಧ್ಯಕ್ಷ ರಾಯಪ್ಪ ಸಾಲಿಮನಿ, ಸಯ್ಯದ್ ಖಾದ್ರಿ, ರಫೀಕ್ ಚೌದ್ರಿ, ಜಗಧೀಶ ಹೊನ್ಕಲ್, ಮಲ್ಲಿಕಾರ್ಜುನ ಬುಕಿಸ್ಟಗಾರ, ಉಮೇಶ ಬಾಗೇವಾಡಿ, ಶಿವಕುಮಾರ ತಳವಾರ, ರಮೇಶ ನಗನೂರ, ನಂದು ಚಿಲ್ಲಾಳ, ಮಹೇಶ ಗೋಗಿ ಸೇರಿದಂತೆ ಹಿರಿಯರಾದ ಮಲ್ಲಯ್ಯ ಫಿರಂಗಿ, ಮಲ್ಲಿಕಾರ್ಜುನ ಚಿಲ್ಲಾಳ, ಕೊಟ್ರೆಪ್ಪ ಇತರರಿದ್ದರು.
ನಿತ್ಯ ಅನ್ನ, ನೀರು ವಿತರಿಸುವ ವ್ಯವಸ್ಥೆ ಯನ್ನು ಸಮಿತಿವತಿಯಿಂದ ಮಾಡಲಾಗಿದ್ದು, ಸಾಕಷ್ಟು ಜನರು ಕೈಲಾದ ತನು ಮನ ಧನ ದಿಂದ ಸಹಾಯ ಸಹಕಾರ ನೀಡುತ್ತಿದ್ದಾರೆ. ಯುವಕರು ಸಮರ್ಪಕವಾಗಿ ಆಹಾರವನ್ನು ಅರ್ಹರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಕೊರೊನಾ ತಡೆಗೆ ಅಗತ್ಯ ಸೇವಾ ಕೈಂಕರ್ಯದಲ್ಲಿ ನಮ್ಮ ಸಮಿತಿ ಮುಂದುವರೆಯಲಿದೆ.
– ಗುರು ಕಾಮಾ & ರಾಜೂ ಚಿಲ್ಲಾಳ.