ಪ್ರಮುಖ ಸುದ್ದಿ
ಕೊರೊನಾಗೆ ಲಸಿಕೆ ಸಿಗುವದು ಡೌಟು- ಬ್ರಿಟನ್ ಪ್ರಧಾನಿ ಅಚ್ಚರಿ ಹೇಳಿಕೆ
ಕೊರೊನಾಗೆ ಲಸಿಕೆ ಸಿಗುವದು ಡೌಟು- ಬ್ರಿಟನ್ ಪ್ರಧಾನಿ ಅಚ್ಚರಿ ಹೇಳಿಕೆ
ವಿವಿಡೆಸ್ಕ್ಃ ಕೊರೊನಾ ಸೋಂಕು ನಿವಾರಣೆಗೆ ಲಸಿಕೆ ಸಿಗುವುದೇ ಡೌಟು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬ್ರಿಟನ್ ದೇಶವ್ಯಾಪ್ತಿ ಲಾಕ್ ಡೌನ್ ಹಂತ ಹಂತವಾಗಿ ಸಡಿಲಿಸುವ ಕುರಿತು ಮಂಗಳವಾರ 50 ಪುಟಗಳ ಮಾರ್ಗಸೂಚಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೊರೊನಾ ಲಸಿಕೆ ಕಂಡು ಹಿಡಿಯಲು ಇಡಿ ವಿಶ್ವದಲ್ಲಿ ಹಲವು ದೇಶಗಳು ತಾಮುಂದು ನಾಮುಂದು ಎಂದು ಪೈಪೋಟಿ ನಡೆಸುತ್ತಿವೆ.
ಪ್ರಪಂಚದಾದ್ಯಂತ ಕೊರೊನಾ ಮಹಾಮಾರಿ ತನ್ನ ಕಬಂಧ ಬಾಹು ಚಾಚಿದ್ದು, ಈ ಸೋಂಕು ತೀವ್ರವಾಗಿ ಹರಡುತ್ತಿದೆ. ಈ ಸೋಂಕು ನಿವಾರಣೆಗೆ ಲಸಿಕೆ ಕಂಡು ಹಿಡಿಯಲು ಇನ್ನು ಒಂದು ವರ್ಷವಾದರೂ ಬೇಕು. ಅಥವಾ ಲಸಿಕೆ ಔಷಧ ದೊರೆಯದೆಯು ಇರುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.