ಪ್ರಮುಖ ಸುದ್ದಿ

14 ದಿನ ದಿಗ್ಬಂಧನ ಪಾಲಿಸದ ಶಂಕಿತನ ವಿರುದ್ಧ ದೂರು ದಾಖಲು

ವಿದೇಶದಿಂದ ಬಂದ ಶಂಕಿತ ಕೊರೊನಾ ರೋಗಿ ನಿಯಮ ಉಲ್ಲಂಘನೆ ಪ್ರಕರಣ ದಾಖಲು

ಶಹಾಪುರಃ ಕಳೆದ ಮಾ.11 ರಂದು ದುಬೈನಿಂದ ಸ್ವದೇಶಕ್ಕೆ ಆಗಮಿಸಿ ತನ್ನೂರಿಗೆ ಆಗಮಿಸಿದ್ದ ನಗರದ ನಾಲ್ವರಿಗೆ 14 ದಿನಗಳ ಕಾಲ ಮನೆಯಲ್ಲಿಯೇ ದಿಗ್ಭಂಧನಕ್ಕೆ ಒಳಗಾಗುವಂತೆ ಇಲ್ಲಿನ ವೈದ್ಯರ ತಂಡ ಸೂಚಿಸಿತ್ತು, ಆ ನಾಲ್ವರಲ್ಲಿ ನಗರದ ಓರ್ವ ಶಂಕಿತ, ವೈದ್ಯರು ಸೂಚಿಸಿದ ಸರ್ಕಾರಿ ನಿಯಮ ಪಾಲನೆ ಮಾಡದೆ ನಗರದ ಹೊರಗಡೆ ತಿರುಗುತ್ತಿರುವ ಪರಿಣಾಮ ನಿರ್ಲಕ್ಷವಹಿಸಿದ ಹಿನ್ನೆಲೆ ಆತನ ಮೇಲೆ ತಹಸೀಲ್ದಾರ ಜಗನ್ನಾಥರಡ್ಡಿ ಅವರು ನಗರಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ಶನಿವಾರ ನಡೆದಿದೆ.

ಕೊರೊನಾ ಶಂಕಿತ ಸ್ಥಳೀಯ ಬಸವೇಶ್ವರ ನಗರ ನಿವಾಸಿ ಮಲ್ಲಿಕಾರ್ಜುನ ಉಳ್ಳಿ ಎಂಬಾತನೇ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಅಸಡ್ಡೆ ತೋರಿದ್ದು, ರಾತ್ರಿ ನಗರದಲ್ಲಿ ಓಡಾಡುತ್ತಿದ್ದ ಎನ್ನಲಾಗಿದೆ. ತಾಲೂಕು ಆಡಳಿತ ಕೊರೊನಾ ನಿಯಂತ್ರಣ ವೈದ್ಯರ ತಂಡ ಪರೀಕ್ಷೆಗೆಂದು ಆತನ ಮನೆಗೆ ತೆರಳಿರುವಾಗಲೂ ಆತ ಸ್ಪಂಧಿಸದೆ ಇರುವದು, ಮತ್ತು ರಾತ್ರಿ ವೇಳೆ ನಗರದಲ್ಲಿ ಸಂಚಾರ ಮಾಡುತ್ತಿರುವ ಕುರಿತು ಆತನಿಗೆ ಎಚ್ಚರಿಕೆ ನೀಡಿದರೂ ನಿರ್ಲಕ್ಷವಹಿಸಿರುವ ಕಾರಣ ದೂರು ದಾಖಲಿಸಲಾಗಿದೆ ಎಂದು ತಹಸೀಲ್ದಾರರು ತಿಳಿಸಿದ್ದಾರೆ. ಅನಿವಾರ್ಯವಾಗಿ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು. ಇಲ್ಲವಾದಲ್ಲಿ ಅಮಾಯಕರನ್ನು ಈತ ಬಲಿ ತೆಗೆದುಕೊಳ್ಳುತ್ತಾನೆ ಎಂಬ ಕಾರಣಕ್ಕೆ ಕಠಿಣ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ನಗರ ಠಾಣೆ ಸಿಪಿಐ ಹನುಮರಡ್ಡೆಪ್ಪ ತಹಸೀಲ್ದಾರರು ನೀಡಿದ ದೂರಿನನ್ವಯ ಐಪಿಎಸ್ ಸೆಕ್ಷನ್ 188 ಪ್ರಕಾರ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.
—————–

Related Articles

Leave a Reply

Your email address will not be published. Required fields are marked *

Back to top button