ಪ್ರಮುಖ ಸುದ್ದಿ
ದೀಪ ಬೆಳಗಿಸಿ ಪ್ರಧಾನಿ ಕರೆಗೆ ಓಗೊಟ್ಟ ಜನತೆ
ದೀಪ ಬೆಳಗಿಸಿ ಪ್ರಧಾನಿ ಕರೆಗೆ ಓಗೊಟ್ಟ ಜನತೆ
ವಿವಿ ಡೆಸ್ಕ್ಃ ಕೊರೊನಾ ಹಾವಳಿಗೆ ಇಡಿ ಜಗತ್ತು ತಲ್ಲಣಗೊಂಡಿದ್ದು, ಕೊರೊನಾ ಎಂಬ ಮಹಾಮಾರಿ ನಾಶಪಡಿಸಲು ಇಡಿ ದೇಶದ 130 ಕೋಟಿ ಜನ ಒಂದಾಗಿ ದೀಪ ಬೆಳಗಿಸುವ ಮೂಲಕ ಪ್ರಧಾನಿ ಮೋದಿಯವರ ಕರೆಗೆ ಓಗೊಟ್ಡ ಜನತೆ ಮನೆ ಮುಂದೆ ಕೆಲವರು ಟೆರೇಸ್ ಮೇಲೆ ದೀಪ ಬೆಳಗಿಸುವ ಮೂಲಕ ಕೊರೊನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದರು.
ಈ ಮಧ್ಯ ನಾಡಿನ ಸಿದ್ಣದಗಂಗಾ ಮಠ, ಸುತ್ತೂರ ಮಠದಲ್ಲೂ ದೀಪವನ್ನು ಬೆಳಗಿಸಿರುವದು ಕಂಡು ಬಂದಿತು.
ಕಲ್ಬುರ್ಗಿ , ಯಾದಗಿರಿ ಸೇರಿದಂತೆ ಶಹಾಪುರದಲ್ಲೂ ಮನೆ ಮನೆಯಲ್ಲಿ ದೀಪ ಬೆಳಗಿಸಿದರು. ಹಲವಡೆ ಟೆರೆಸ್ ಮೇಲೆ ಫ್ಲ್ಯಾಶ್ ಹಾಕಿದರು.
ಇನ್ನೂ ಕೆಲವಡೆ ಮನೆ ಮುಂದೆ ದೀಪವನ್ನು ಬೆಳಗಿಸಿ ಮನೆಯಲ್ಲಿ ದೀಪವನ್ನು ಹಚ್ಚಿ 9 ನಿಮಿಷಗಳ ಕಾಲ ಧ್ಯಾನ, ಕೆಲವಡೆ ಹನುಮಾನ್ ಚಾಲೀಸ್ ಪಠಣ ಸಹ ಮಾಡಿರುವದು ಕಂಡು ಬಂದಿತು. ಮತಗತೆ ಕೆಲವಡೆ ತಮಸೋಮ ಜ್ಯೋತಿರ್ಗಮಯ ಎಂಬ ಧ್ವನಿ ಮೊಳಗಿತು.