ಪ್ರಮುಖ ಸುದ್ದಿ
ದೇಶದಲ್ಲಿ KORONA ಗೆ 99 ವೈದ್ಯರು ಬಲಿ.!
ದೇಶದಲ್ಲಿ KORONA ಗೆ 99 ವೈದ್ಯರು ಬಲಿ.!
ವಿವಿ ಡೆಸ್ಕ್ಃ ದೇಶದಲ್ಲಿ ಮಹಾಮಾರಿ ಕೊರೊನಾ ಇದುವರೆಗೆ 99 ವೈದ್ಯರನ್ನ ಬಲಿ ತೆಗೆದುಕೊಂಡಿದೆ. ಅಲ್ಲದೆ ವೈದ್ಯರು, ನರ್ಸ್, ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಮೆಡಿಕಲ್ ಅಸೋಸಿಯೇಷನ್ ರೆಡ್ ಅಲರ್ಟ್ ಘೋಷಿಸಿದೆ.
ಕೊರೊನಾ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸೂಕ್ತ ಸುರಕ್ಷತೆ ಅನುಸರಿಸಬೇಕು. ಮತ್ತು ಸರ್ಕಾರ ಚಿಕಿತ್ಸೆ ನೀಡುವ ವೈದ್ಯ ಸಿಬ್ಬಂದಿಗೆ ಸೂಕ್ತ ರಕ್ಷಣೆ ಕುರಿತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಐಎಂಎ ಬಿಡುಗಡೆ ಮಾಡಿದ ವರದಿ ಅನ್ವಯ ದೇಶದಲ್ಲಿ 1302 ವೈದ್ಯರಿಗೆ ಸೋಂಕು ತಗುಲಿದೆ. ಇದರಲ್ಲಿ 99 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ 73 ಜನ 50 ವರ್ಷ ಮೇಲ್ಪಟ್ಟವರು 19 ಮಂದಿ 35 ರಿಂದ 50 ವರ್ಷದ ಒಳಗಿನ ವಯಸ್ಸಿನವರು, 7 ಮಂದಿ 35 ವರ್ಷಕ್ಕಿಂತ ಒಳಗಿನವರು ಎಂದು ಮಾಹಿತಿ ನೀಡಿದೆ.