ಕ್ಯಾಂಪಸ್ ಕಲರವ
ರಾಜ್ಯದಲ್ಲಿ ಕೊರೋನಾ ಪತ್ತೆಯಾಗಿಲ್ಲ – ಸಿಎಂ ಸ್ಪಷ್ಟನೆ
ರಾಜ್ಯ ದಲ್ಲಿ ಕೊರೋನಾ ಪತ್ತರಯಾಗಿಲ್ಲ – ಸಿಎಂ ಸ್ಪಷ್ಟನೆ
ಬೆಂಗಳೂರಃ ರಾಜ್ಯದಲ್ಲಿ ಇದುವರೆಗೂ ಕೊರೋನಾ ವೈರಸ್ ಪಾಸಿಟಿವ್ ಪತ್ತೆಯಾಗಿಲ್ಲ. ಹೀಗಾಗಿ ಯಾರೊಬ್ಬರು ಆತಂಕ ಪಡುವ ಅಗತ್ಯ ವಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ಪತ್ತೆಯಾಗಿಲ್ಲ. ಹೀಗಾಗಿ ಭಯ ಭೀತಿ ಬೇಡ. ಮುಂಜಾಗ್ರತಾ ಕ್ರಮವಾಗಿ ಹಲವರನ್ನು ಪರಿಕ್ಷೆಗೆ ಇಳಪಡಿಸಲಾಗಿದೆ.
ತೀವ್ರ ನಿಗಾವಹಿಸಲಾಗಿದ್ದು, ಮುಂಜಾಗೃತವಾಗಿ ಕಟ್ಟೆಚ್ಚರವಹಿಸಲಾಗಿದೆ ಎಂದು ಅವು ತಿಳಿಸಿದರು.
ಆಯಾ ಜಿಲ್ಲೆಗಳಲ್ಲಿ ಕೊರೋನಾ ವೈರಸ್ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.