ಶಹಾಪುರಃ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಮೃತ- ಕೊರೊನಾ ಶಂಕೆ
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಮೃತ- KORONA DOUBT
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದ 50 ವರ್ಷದ ವ್ಯಕ್ತಿ ಯೋರ್ವ ಅನಾರೋಗ್ಯ ದಿಂದ ಬಳಲುತ್ತಿರುವ ಕಾರಣ ಕಲಬುರ್ಗಿ ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂಧಿಸದೆ ರವಿವಾರ ಮೃತಪಟ್ಟಿದ್ದಾನೆ.
ಈತ ಕಳೆದ ಹತ್ತು ವರ್ಷದಿಂದ ಹೃದಯ ಸಂಬಂಧಿ ಕಾಯಿಲೆ ಹೊಂದಿದ್ದ ಅಲ್ಲದೆ ಈಚೆಗೆ ಪಾರ್ಶ್ವವಾಯು ಕಾಯಿಲೆಯಿಂದಲು ಬಳಲುತ್ತಿದ್ದ, ಹೀಗಾಗಿ ಚಿಕಿತ್ಸೆಗೆಂದು ಕಲಬುರ್ಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ನೀಡುವ ಮುಂಚೆ ಕೊರೊನಾ ಟೆಸ್ಟಿಂಗ್ ಮಾಡಲಾಗಿದೆ.
ಆದರೆ ಇನ್ನಿ ಪರೀಕ್ಷಾ ವರದಿ ಬಂದಿಲ್ಲ. ಅಷ್ಟರಲ್ಲಿ ವ್ಯಕ್ತಿ ಮೃತಪಟ್ಟಿರುವ ಕಾರಣ, ಆತನನ್ನು ಕೋವಿಡ್ -19 ನಿಯಮಾವಳಿಯಂತೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಂತ್ಯ ಸಂಸ್ಕಾರ ಮಾಡಿದೆ ಎನ್ನಲಾಗಿದೆ.
ಪರೀಕ್ಷಾ ವರದಿ ಬರೋವರೆಗೂ ಕುಟುಂಬಸ್ಥರನ್ನು ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ. ಅಲ್ಲದೆ ಎಲ್ಲರ ಸ್ವ್ಯಾಬ್ ಟೆಸ್ಟಿಂಗ್ ಗೆ ಒಳಪಡಿಸಲಾಗುವದು ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ತಿಳಿಸಿದ್ದಾರೆ. ಮೃತ ವ್ಯಕ್ತಿ ವಾಸಿಸುತ್ತಿದ್ದ ಬಡಾವಣೆ ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.