ಕೊರೊನಾ ನಿಯಂತ್ರಣಃ ನಿಯಮ ಪಾಲಿಸದ ಎಚ್‍ಡಿಎಫ್‍ಸಿ ಬ್ಯಾಂಕ್
ವಿತ್‍ಡ್ರಾ ಫಾರಂ ನೀಡದೆ ಗ್ರಾಹಕರಿಗೆ ತೊಂದರೆ ನೀಡಿದ ಎಚ್‍ಡಿಎಫ್‍ಸಿ
ಶಹಾಪುರಃ ನಗರದ ಬೀದರ-ಬೆಂಗಳೂರ ಹೆದ್ದಾರಿಗೆ ಇರುವ ಎಚ್‍ಡಿಎಫ್‍ಸಿ ಬ್ಯಾಂಕ್ ಹಣ ಡ್ರಾ ಮಾಡಲು ಬಂದ ಗ್ರಾಹಕರಿಗೆ ವಿತ್‍ಡ್ರಾ ಫಾರಂ ನೀಡದೆ ಅನಗತ್ಯವಾಗಿ ತೊಂದರೆ ನೀಡಿದ ಘಟನೆ ಶುಕ್ರವಾರ ನಡೆದಿದೆ.
ಎಲ್ಲಡೆ ಕೊರೊನಾ ವೈರಸ್ ಭೀತಿಯಲ್ಲಿ ಜನರು ಕಾಲಕಳೆಯುತ್ತಿದ್ದು, ಲಾಕ್‍ಡೌನ್ ಬೇರೆ ನಡೆದಿದ್ದು, ಇಂತಹ ಸ್ಥಿತಿಯಲ್ಲಿ ಈ ಬ್ಯಾಂಕ್‍ಗೆ ಆಗಮಿಸ ಮಹಿಳೆಯೋರ್ವಳಿಗೆ ವಿತ್ ಡ್ರಾ ಫಾರಂ ನೀಡದೆ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಿಬಬ್ಬಂದಿ ಸುಖಾಸುಮ್ಮನೆ ತೊಂದರೆ ನೀಡಿದ್ದಾರೆ ಎಂದು ಮುಖಂಡ ಗುರು ಕಾಮಾ ಆರೋಪಿಸಿದ್ದಾರೆ.
ಅಲ್ಲದೆ ಕೊರೊನಾ ತಡೆಗೆ ಮುನ್ನೆಚ್ಚರಿಕೆ ಕೈಗೊಳ್ಳಬೇಕಾದ ಬ್ಯಾಂಕ್ ಯಾವುದೇ ಸ್ಯಾನಿಟರೀಸ್ ಕೈ ತೊಳೆದುಕೊಳ್ಳಲು ನೀರು ಸಹ ವ್ಯವಸ್ಥೆ ಮಾಡದಿರುವದು ಸೋಜಿಗವಾಗಿದೆ. ಅಲ್ಲದೆ ಬ್ಯಾಂಕಿಗೆ ಬರುವ ಗ್ರಾಹಕರಿಗೆ ಅಂತರ ಕಾಯ್ದುಕೊಳ್ಳಬೇಕಾದ ಮಾಹಿತಿಯೂ ಅಲ್ಲಿಲ್ಲ. ಮೇಲಾಗಿ ಹವಾನಿಯಂತ್ರಣದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಕೊರೊನಾ ನಿಯಂತ್ರಣ ನಿಯಮಗಳು ಈ ಬ್ಯಾಂಕ್‍ಗೆ ಅನ್ವಯಿಸುವದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಕೂಡಲೇ ತಾಲೂಕಾ ಆಡಳಿತ ಇಂತಹ ಬ್ಯಾಂಕ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಬ್ಯಾಂಕ್ ವ್ಯವಸ್ಥಾಪಕರಿಗೆ ನಾಗರಿಕರ ಹೋರಾಟ ಸಮಿತಿಯಿಂದ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.