ಕೊರೊನಾಃ ಉಪಾಹಾರ, ನೀರು ವಿತರಣೆ ಮಾಡಿದ ಕಕಸೇನೆ
ಉಪಾಹಾರ, ನೀರಿನ ಬಾಟಲ್, ಬಾಳೆಹಣ್ಣು ವಿತರಣೆ
ಶಹಾಪುರಃ ನಗರದ ಭೀಮರಾಯನ ಗುಡಿ ಕೃಷ್ಣಾ ಮೇಲ್ದಂಡೆ ಯೋಜನೆ ಆಸ್ಪತ್ರೆಯಲ್ಲಿ ತಪಾಸಣೆಗೆ ಕಾಯುತ್ತಿದ್ದ ವಲಸಿಗರಿಗೆ ಅನ್ನ, ನೀರು ಮತ್ತು ಬಾಳೆಹಣ್ಣು ವಿತರಿಸುವ ಮೂಲಕ ಇಲ್ಲಿನ ಕಲ್ಯಾಣ ಕರ್ನಾಟಕ ಯುವ ಸೇನೆ ಉತ್ತಮ ಕಾರ್ಯ ಮಾಡಿತು.
ಭೀಮರಾಯನ ಗುಡಿ ಆಸ್ಪತ್ರೆ ಸೇರಿದಂತೆ ಭೀ.ಗುಡಿ ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೂ ಆಹಾರ, ನೀರು ವಿತರಿಸಿದರು. ಅಲ್ಲದೆ ನಗರದ ಬೀದಿಯಲ್ಲಿ ಅಮಾಯಕರಿಗೆ, ಭಿಕ್ಷುಕರಿಗೆ ಅನ್ನ ನೀರು ಹಂಚಿದರು. ಸರ್ಕಾರ ಬಾಂಬೆ, ಪುಣೆ ಮತ್ತು ಬೆಂಗಳೂರಿನಿಂದ ಬಂದ ವಲಸಿಗರಿಗೆ ತಪಾಸಣೆ ಜೊತೆ ಇಂದಿಷ್ಟು ಆಹಾರ ಮತ್ತು ನೀರು ನೀಡುವ ವ್ಯವಸ್ಥೆ ಮಾಡಬೇಕಿದೆ.
ವಲಸಿಗರು ಊಟ ನೀರಿಗಾಗಿ ಪರದಾಡುವ ಸ್ಥಿತಿ ಕಂಡು ಜನರು ಮರಗುತ್ತಿದ್ದಾರೆ. ಹೀಗಾಗಿ ನಗರದ ಸಂಘ ಸಂಸ್ಥೆಗಳು ಕೈಲಾದ ಸಹಾಯ ಸಹಕಾರ ಮಾಡುತ್ತಿರುವದು ಕಂಡು ಬರುತ್ತಿದೆ. ಸೇವೆಯಲ್ಲಿರುವವರಿಗೂ ಸೇನೆ ಅನ್ನ ನೀರು ವಿತರಣೆ ಮಾಡಿದೆ.
ಸರ್ಕಾರ ಕರ್ತವ್ಯದಲ್ಲಿ ಇರುವ ತಮ್ಮ ಸಿಬ್ಬಂದಿಗೂ ಅನ್ನ, ಕುಡಿಯುವ ನೀರಿನ ವಯವಸ್ಥೆ ಮಾಡಬೇಕು. ಅಲ್ಲದೆ ಪೊಲೀಸರಿಗೂ ಮಾಸ್ಕ್ ಮತ್ತು ಹ್ಯಾಂಡ್ ಗ್ಲೋಸ್ ಸೇರಿದಂತೆ ಸ್ಯಾನಿಟರೈಸ್ಡ್ ವಿತರಿಸವು ಕೆಲಸ ಮಾಡಬೇಕು ಎಂದು ಸೇನೆ ಅಧ್ಯಕ್ಷ ಭೀಮಾಶಂಕರ ಕಟ್ಟಿಮನಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸೇನೆ ಜಿಲ್ಲಾಧ್ಯಕ್ಷ ಬಾಲು ಕಕ್ಕೇರಾ, ಚಂದ್ರು ಕಟ್ಟಿಮನಿ, ಭೀಮು ಬಿಲ್ಲವ, ಹುಸನಪ್ಪ ಗುತ್ತೇದಾರ, ಪ್ರದೀಪ, ದೇವು ಹಾದಿಮನಿ, ಭೀಮು ಬಡಿಗೇರ, ಸಂಗಮೇಶ ಇತರರಿದ್ದರು.