ಪ್ರಮುಖ ಸುದ್ದಿ
ಕಲಬುರ್ಗಿ 2 ವರ್ಷದ ಮಗುವಿಗೆ ಕೋವಿಡ್ -19 ಸೋಂಕು
ಕಲಬುರ್ಗಿಃ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ 2 ವರ್ಷದ ಮಗುವಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಈ ಕುರಿತು ಕೋವಿಡ್-19 ಟೆಸ್ಟ್ ಮಾಡಿಸಲಾಗಿ ಕೊರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಉತ್ತರ ಪ್ರದೇಶ ಮೂಲ ದಂಪತಿಯ ಹೆಣ್ಣುಮಗುವಿಗೆ ಈ ಸೋಂಕು ಕಾಣಿಸಿಕೊಂಡಿದೆ. ಈ ಕುರಿತು ಕೋವಿಡ್ 19 ಟೀಮ್ ತೀವ್ರ ಶೋಧ ನಡೆಸಿದೆ ಎನ್ನಲಾಗಿದೆ. ಮಗುವಿನಲ್ಲಿ ಕಾಣಿಸಿಕೊಂಡ ಕೊರೊನಾ ಕುರಿತು ತೀವ್ರ ತಪಾಸಣೆ, ವಿಚಾರಣೆ ನಡೆದಿದೆ ಎನ್ನಲಾಗಿದೆ.
ಮಗು ವಾಸಿಸುವ ಪಾಲಕರ ಮನೆಯ ಎಲ್ಲರನ್ನು ತಪಾಸಣೆಗೆ ಒಳಪಡಿಸಿದ್ದು, ಅಲ್ಲದೆ ಇಡಿ ಬಡಾವಣೆ ಸುತ್ತಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.