ಪ್ರಮುಖ ಸುದ್ದಿ
ಕೊಂಗಂಡಿಯ ಮೃತ ಬಾಲಕಿಗೆ ಕೊರೊನಾ ಇಲ್ಲಃ ನಿಟ್ಟುಸಿರು ಬಿಟ್ಟ ಜನತೆ
ಯಾದಗಿರಿ,ಶಹಾಪುರಃ ಜಿಲ್ಲೆಯ ಶಹಾಪುರ ತಾಲೂಕಿನ ಕೊಂಗಂಡಿ ಗ್ರಾಮದ ಬಾಲಕಿಯೋರ್ವಳು ಮೃತಪಟ್ಟಿರುವದು ಕೊರೊನಾ ಸೋಂಕಿನಿಂದ ಎಂದು ಶಂಕೆ ವ್ಯಕ್ತವಾಗಿತ್ತು. ಆದರೆ ಇದೀಗ ಮೃತ ಬಾಲಕಿಯ ರಕ್ತ ಮಾದರಿ ಮತ್ತು ಗಂಟಲು ದ್ರವ ಪರೀಕ್ಷೆಯ ಪ್ರಯೋಗಾಲಯದ ವರದಿಯಲ್ಲಿ ನೆಗೆಟಿವ್ ಬಂದಿದ್ದು ಜನತೆ ನಿಟ್ಟುಸಿರು ಬಿಡುವಂತಾಗಿದೆ.
ತೀವ್ರ ಜ್ವರ ಹಾಗೂ ಕೆಮ್ಮಿನಿಂದ ಬಳಲಿ, ಸಾವನ್ನಪ್ಪಿದ ಶಹಾಪುರ ತಾಲೂಕಿನ ಕೊಂಗಂಡಿ ಗ್ರಾಮದ 5 ವರ್ಷದ ಬಾಲಕಿಯ ರಕ್ತದ ಮಾದರಿ ಮತ್ತು ಗಂಟಲ ದ್ರವ ಪರೀಕ್ಷೆ ಪ್ರಯೋಗಾಲಯದ ವರದಿ ನೆಗೆಟಿವ್ ಬಂದಿದ್ದು, ಬಾಲಕಿಗೆ ಕೊರೊನಾ ಸೋಂಕು ಇಲ್ಲ ಎಂಬುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎಸ್.ಪಾಟೀಲ್ ಖಚಿತ ಪಡಿಸಿದ್ದಾರೆ.
ಅಲ್ಲದೆ ಬೆಂಗಳೂರಿನಿಂದ ವಾಪಾಸ್ ಆಗಿದ್ದ ಗೋಪಾಲಪುರ ಗ್ರಾಮದ 20 ಜನರ ವರದಿಗಳು ಸಹ ನೆಗೆಟಿವ್ ಇದೆ ಎಂದು ತಿಳಿಸಿದ ಅವರು, ಸದ್ಯ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಯಾದಗಿರಿ ಜಿಲ್ಲೆ ಸದ್ಯ ಸೇಫ್ ಇದೆ ಎನ್ನಲಾಗಿದೆ.