ಪ್ರಮುಖ ಸುದ್ದಿ
ನಾಪತ್ತೆಯಾದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ, ಉದ್ಯಮಿ ಸಿದ್ಧಾರ್ಥ ಬರೆದ ಪತ್ರವೇನು?
ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ ನಾಪತ್ತೆ ಹಿನ್ನೆಲೆ ಒಂದುಕಡೆ ಉಳ್ಳಾಲ ಬಳಿ ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ನಡೆದಿದೆ. ಮತ್ತೊಂದು ಕಡೆ ಪ್ರಕರಣದ ಬಗ್ಗೆ ಪೊಲೀಸ್ರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಸಿದ್ಧಾರ್ಥ ಕಾಫಿಡೇ ಫ್ಯಾಮಿಲಿಗೆ ಪತ್ರ ಬರೆದು ಮೇಲ್ ಮಾಡಿದ್ದಾರೆ ಎಂಬುದಾ ತಿಳಿದು ಬಂದಿದ್ದು ಆ ಪತ್ರದ ಸಾರಾಂಶ ಹೀಗಿದೆ.
37 ವರ್ಷಗಳಿಂದ ಕಂಪನಿ ಬೆಳೆಸಲು ಬದ್ಧತೆಯಿಂದ ಕೆಲಸ ಮಾಡಿದ್ದೇನೆ. 6 ತಿಂಗಳ ಹಿಂದಷ್ಟೇ ಅಧಿಕ ಪ್ರಮಾಣದ ಸಾಲ ಪಡೆದಿದ್ದೇನೆ. ಸಾಲಗಾರರ ಒತ್ತಡದಿಂದ ನನಗೆ ಈ ಪರಿಸ್ಥಿತಿ ಬಂದಿದೆ. ಲಾಭದಾಯಕ ಯಶಸ್ವಿ ಉದ್ಯಮಿಯಾಗಲು ನನ್ನಿಂದ ಸಾಧ್ಯವಾಗಲಿಲ್ಲ.
ಷೇರುಗಳನ್ನು ಹಿಂಪಡೆಯುವಂತೆ ನನ್ನ ಮೇಲೆ ಒತ್ತಡವಿದೆ. ಈಗ ಎಲ್ಲವನ್ನೂ ಕೈಚೆಲ್ಲಲು ನಿರ್ಧಾರ ಮಾಡಿದ್ದೇನೆ. ನನ್ನ ಎಲ್ಲ ನಿರ್ಧಾರಗಳಿಗೆ ನಾನೇ ನೇರ ಕಾರಣ. ನೀವು ನನ್ನನ್ನು ಅರ್ಥ ಮಾಡಿಕೊಳ್ಳುತ್ತೀರಿ, ಕ್ಷಮಿಸುತ್ತೀರಿ ಎಂದುಕೊಂಡಿದ್ದೇನೆ.