ಪ್ರಮುಖ ಸುದ್ದಿ

ಶಹಾಪುರನಲ್ಲಿ ರಾತ್ರಿ ಬಂದಿಳಿದ ವಲಸೆ ಕಾರ್ಮಿಕರ ಓಡಾಟ ಜನರಲ್ಲಿ ಆತಂಕ

ಶಹಾಪುರನಲ್ಲಿ ರಾತ್ರಿಯೇ ಬಂದಿಳಿದ ವಲಸೆ ಕಾರ್ಮಿಕರ ಓಡಾಟ ಜನರಲ್ಲಿ ಆತಂಕ
ಶಹಾಪುರಃ ನಗರದ ಸರ್ಕಾರಿ ಪ್ರಥಮ ದರ್ಜೆ‌ ಕಾಲೇಜಿನಲ್ಲಿ‌ ನಿನ್ನೆ ರಾತ್ರಿ ಮಹಾರಾಷ್ಟ್ರ ದಿಂದ ನಾಲ್ಕು ಬಸ್ ನಲ್ಲಿ ಬಂದಿಳಿದ ವಲಸೆ ಕಾರ್ಮಿಕರು ಬೆಳ್ಳಂಬೆಳಗ್ಗೆ ನಗರದಲ್ಲಿ ಬೇಕಾಬಿಟ್ಟಿ‌‌ ಓಡಾಡುತ್ತಿದ್ದು, ನಗರದ ಜನತೆಯಲ್ಲಿ ಆತಂಕ ಎದುರಾಗಿದೆ.

ಮಹಾರಾಷ್ಟ್ರದಿಂದ ಆಗಮಿಸಿದ ಕಾರ್ಮಿಕರಿಂದಲೇ ಮಹಾ ಕಂಟಕ ಆವರಿಸಿದ್ದು, ಜನತೆ‌ ಭಯದಲ್ಲಿರುವಾಗಲೇ ನಗರದ ಡಿಗ್ರಿ ಕಾಲೇಜು ಆವರಣಕ್ಕೆ ಬಂದಿಳಿದ ಮಹಾರಾಷ್ಟದ ಮುನಾಲ್ ಇತರೆ ಪ್ರದೇಶದಿಂದ ಆಗಮಿಸಿದ ಕಾರ್ಮಿಕರನ್ನು ಇಳಿಸಲಾಗಿದ್ದು,ಅವರೆಲ್ಲ ಬೇಕಾಬಿಟ್ಟಿ ಒಡಾಡುತ್ತಿರುವದರಿಂದ ನಹರದಲ್ಲಿ ಆತಂಕದ‌ ಛಾಯೆ ಮೂಡಿದೆ.

ಇವರೆಲ್ಲ ಮಹಾರಾಷ್ಟ್ರದಿಂದ ಟ್ರೇನ್ ಮೂಲಕ ಯಾದಗಿರಿಗೆ ಬಂದಿಳಿದಿದ್ದು ಸುರಪುರ ತಾಲೂಕಿನ ಹುಣಸಿಗಿ, ದೇವತ್ಕಲ್‌ ಇತರೆ ಗ್ರಾಮದವರಾದ ಇವರನ್ನು‌ ಜಿಲ್ಲಾಡಳಿತ ರಾತ್ರಿ‌ ನಾಲ್ಕು ಬಸ್‌ನಲ್ಲಿ ಸುಮಾರು 160 ಕ್ಕೂ ಹೆಚ್ಷು ವಲಸೆ ಕಾರ್ಮಿಕರನ್ನು ಸುರಪುರ ತಾಲೂಕಿಗೆ ಕಳುಹಿಸಿದ್ದು, ಅಲ್ಲಿ ಸಮರ್ಪಕ‌ ಸ್ಥಳವಕಾಶ ದೊರೆಯದ‌ ಕಾರಣ‌‌‌ ಕೆಂಭಾವಿ‌ ಮೂಲಕ ಶಹಾಪುರ ನಗರದ ಡಿಗ್ರಿ ಕಾಲೇಜು ಆವರಣದಲ್ಲಿ‌ ಮಧ್ಯರಾತ್ರಿ‌ ಇಳಿಸಿ ಹೋಗಲಾಗಿದೆ ಎನ್ನಲಾಗಿದೆ.

ರಾತ್ರಿ‌ ಕಂದಾಯ ಇಲಾಖೆಯ ಸಿಬ್ಬಂದಿ ಓರ್ವರು‌ ಬಂದು ಕಾಲೇಜು ಕಟ್ಟಡದ‌ ಗೆಟ್ ತೆರೆದು ಮಳೆ ಗಾಳಿ ಇರುವದರಿಂದ ಒಳಗಡೆ ಉಳಿಯಲು ಹೇಳಿ ಹೊರಟು ಹೋಗಿದ್ದಾರೆ ಎನ್ನಲಾಗಿದೆ.

ಬೆಳಗ್ಗೆ 7 ಗಂಟೆಯಾದರೂ ಯಾರೊಬ್ಬರು ಬಾರದ ಕಾರಣ ಮತ್ತು ಮುಖ್ಯವಾಗಿ‌ ಸೂಕ್ತ ಪೊಲೀಸ್ ಬಂದೋಬಸ್ತ್ ಇಲ್ಲದೆ ಇರುವದರಿಂದ ಕ್ವಾರಂಟೈನ್ ನಲ್ಲಿಡಬೇಕಾದ ಈ ಕಾರ್ಮಿಕರು‌ ತಹಶೀಲ್ ಕಚೇರಿ ಮುಂದಿನ ಪಕ್ಕದ ಹೊಟೇಲ್ ಗಳಲ್ಲಿ‌ ಜಮಾವಣೆಯಾಗಿ ನಿಂತು ಚಹಾ ಸೇವನೆ‌ ಮಾಡುತ್ತಿರುವದು ಕಂಡು ಬಂದಿತು. ಅಲ್ಲದೆ ಅಂಗಡಿಗಳಲ್ಲಿ ಗುಟ್ಕಾ‌‌ ಬಿಸ್ಕಿಟ್ ತರಲು ಅವರೆಲ್ಲ‌ ಓಡಾಡುತ್ತಿರುವದು ಕಂಡು ಬಂದಿತು.

ಇನ್ನೂ‌ ಯಾರು ಬಂದಿಲ್ರಿ ಪ್ರಯಾಣದಿಂದಾಗಿ ಮಕ್ಕಳು ಅಳುತ್ತಿವೆ.‌ ಹಾಲು‌ ಬಿಸ್ಕಿಟ್ ಎನಾದರೂ ಸಿಗಬಹುದೆಂದು‌ ಜನ ಅಂಗಡಿ, ಹೊಟೇಲ್ ಹುಡುಕುತ್ತಾ‌ ಹೋಗಿದ್ದಾರೆ ಕೆಲವರು ಎಂದು ವಲಸೆ ಕಾರ್ಮಿಕ ರಾಮು‌ ರಾಠೋಡ ತಿಳಿಸಿದರು.

ಇದನ್ನು ಗಮನಿಸಿದ ನಾಗರಿಕ ಹೋರಾಟ ಸಮಿತಿ ಕಾರ್ಯಕರ್ತರು ಡಿಗ್ರಿ ಕಾಲೇಜಿಗೆ ತೆರಳಿ ಎಲ್ಲೂ ಓಡಾಡದಂತೆ‌ ಜಾಗೃತಿ ಮೂಡಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿತು.

ಮತ್ತು‌ ತಹಶೀಲ್ದಾರರನ್ನು ಸಂಪರ್ಕಿಸಿ ಕೂಡಲೇ ಇವರಿಗೆ ಉಪಾಹಾರ, ಕುಡಿಯಲು ನೀರು, ಚಹಾ‌ ಮತ್ತು ಮಕ್ಕಳಿಗೆ ಹಾಲಿನ ವ್ಯವಸ್ಥೆ‌ ಮಾಡುವಂತೆ‌ ಮನವಿ ಮಾಡಿತು.
ತಕ್ಷಣ ಸ್ಪಂಧಿಸಿದ ತಹಶೀಲ್ದಾರ‌ ಜಗನ್ನಾಥರಡ್ಡಿ ಈಗಾಗಲೇ ಉಪಾಹಾರ‌ ಸಿದ್ಧವಾಗ್ತಿದೆ ಕೂಡಲೇ ಸಿಬ್ಬಂದಿ ನೋಡಲ್ ಅಧಿಕಾರಿಗಳು ಅಲ್ಲಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಆದರೆ ಕಾರ್ಮಿಕರನ್ನು ರಾತ್ರೋರಾತ್ರಿ ಬಿಟ್ಟು‌ಹೋಗಿದ್ದು ಯಾರೊಬ್ಬರೂ ಇಲ್ಲಿ ಕಾವಲು ಸಿಬ್ಬಂದಿ ಅಥವಾ‌ ಪೊಲೀಸ್‌ ಯಾರು ಇಲ್ಲ ಬೇಕಾಬಿಟ್ಟಿಯಾಗಿ‌ ಹೊರಗಡೆ‌ ಓಡಾಡುತ್ತಿದ್ದಾರೆ. ಇವರಲ್ಲಿ ಯಾರಾದರೂ ಒಬ್ಬರು ಪಾಸಿಟಿವ್ ಇದ್ರೆ‌ ಸಮಸ್ಯೆಯಾಗಲಿದೆ. ಕೂಡಲೇ ಸೂಕ್ತ ಬಂದೋಬಸ್ತ್‌ ಗೆ ವ್ಯವಸ್ಥೆ‌‌ ಮಾಡಬೇಕೆಂದು ಸಮಿತಿ ಮುಖಂಡ ಗುರು ಕಾಮಾ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಗಂಗಾಧರಮಠ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button