ಶಹಾಪುರಃ ಕ್ವಾರಂಟೈನ್ ನಲ್ಲಿದ್ದ ಮೂವರಿಗೆ ಕೊರೊನಾ ಸೋಂಕು
ಕ್ವಾರಂಟೈನ್ ನಲ್ಲಿ ಬಂಧಿಯಾಗಿರುವ ಮೂವರಲ್ಲಿ ಉಲ್ಬಣಗೊಂಡ ಕೊರೊನಾ
ಶಹಾಪುರಃ ತಾಲೂಕಿನ ಎರಡು ಕ್ವಾರಂಟೈನ್ ಕೇಂದ್ರದಲ್ಲಿರುವ ಮಹಾರಾಷ್ಟ್ರ ದಿಂದ ಆಗಮಿಸಿದ್ದ 3 ಜನ ಕಾರ್ಮಿಕರಿಗೆ ಕೊರೊನಾ ಸೋಕು ದೃಢಪಟ್ಟಿದ್ದು, ಅವರನ್ನು ಯಾದಗಿರಿಯ ನಿಗದಿತ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೊರಡಿಸಿದ ಪ್ರಕಟಣೆ ತಿಳಿಸಲಾಗಿದೆ.
ತಾಲೂಕಿನ ಕನ್ಯಾಕೋಳೂರ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿರುವ ಇಬ್ಬರು ಕಾರ್ಮಿಕರು ಸೇರಿದಂತೆ ನಗರದ ರಾಣಿಚನ್ನಮ್ಮ ವಸತಿ ನಿಲಯದ ಕ್ವಾರಂಟೈನ್ ಕೇಂದ್ರದಲ್ಲಿರುವ ಓರ್ವ ಕಾರ್ಮಿಕನಿಗೆ ಕೊರೊನಾ ಸೋಂಕು ತಗುಲಿದೆ ಎನ್ನಲಾಗಿದೆ. ಆದರೆ ಸೋಂಕಿತರು ಯಾವ ಕೇಂದ್ರದಲ್ಲಿದ್ದರು ಎಂಬುದು ಪ್ರಕಟಣೆಯಲ್ಲಿ ದಾಖಲಿಸಿರುವದಿಲ್ಲ.
ಮಾಹಿತಿ ಪ್ರಕಾರ ಈ ಎರಡು ಕ್ವಾರಂಟೈನ್ ಕೇಂದ್ರಗಳ ಮುಂದೆ ಪೊಲಿಸ್ ಬಂದೊಬಸ್ತ್ ಮಾಡಲಾಗಿದ್ದು, ಮುಂಜಾಗೃತ ಕ್ರಮವಾಗಿ ಆರೋಗ್ಯ ಇಲಾಖೆಯ ಅಂಬ್ಯುಲೆನ್ಸ್ ನಿಲ್ಲಿಸಲಾಗಿದೆ. ಸೋಂಕಿತರು ಕ್ವಾರಂಟೈನ್ ಕೇಂದ್ರದಲ್ಲಿರುವ ಮಹಾರಾಷ್ಟ್ರ ದ ಥಾಣೆ ಮತ್ತು ಮುಂಬಯಿಯಿಂದ ಬಂದವರಾಗಿದ್ದಾರೆ. P-1139, p-1140, p-1141 ಶಹಾಪುರ ಸೋಂಕಿತರ ಸಂಖ್ಯೆ ನಮೂದಿಸಲಾಗಿದೆ.