ಶಹಾಪುರ 101 ಜನರಿಗೆ ಸೋಂಕು, 22 ಜನ ಪೊಲೀಸರಿಗೂ ಸೋಂಕು ದೃಢ
ಶಹಾಪುರ 101 ಜನರಿಗೆ ಸೋಂಕು, 22 ಜನ ಪೊಲೀಸರಿಗೂ ಸೋಂಕು ದೃಢ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಸೋಮವಾರ ಒಟ್ಟು 101 ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಅದರಲ್ಲಿ ಶಹಾಪುರ ಪೊಲೀಸ್ ಠಾಣೆ ಮತ್ತು ಭೀಮರಾಯನ ಗುಡಿ ಠಾಣೆಯ ಅಂದಾಜು 22 ಜನ ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿರುವ ಮಾಹಿತಿ ದೊರೆಯುತ್ತಿದ್ದಂತೆ ನಗರ ಪ್ರದೇಶದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಅಲ್ಲದೆ ಭೀಮರಾಯನ ಗುಡಿ ಸಿಇಓ ಆಫೀಸ್ ನ 8-10 ಜನ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ದೃಢವಾಗಿದೆ. ಕಾಡಾ ಕಚೇರಿ ಸಿಇಓ ಆಫೀಸ್ ಮತ್ತು ಭೀ.ಗುಡಿಠಾಣೆ ಸೀಲ್ ಡೌನ್ ಮಾಡಲಾಗಿದೆ.
ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೊನ್ನೆ 4+14 ಒಟ್ಟು 18 ಜನರಿಗೆ ಕೊರೊನಾ ತಗುಲಿದ್ದು ಮಹಾಮಾರಿ ತೀವ್ರತೆ ಹೆಚ್ಚಾಗಿದೆ. ತಾಲೂಕಿನ ಬೇವಿನಹಳ್ಳಿ, ಹುರಸಗುಂಡಗಿ, ಹಾಲಬಾವಿ ಸೇರಿದಂತೆ ಸ್ಥಳೀಯ ವಿದ್ಯಾನಗರ ಇತರಡೆಯೂ ಕೊರೊನಾ ಪಾಸಿಟಿವ್ ಉಲ್ಬಣವಾಗುತ್ತಿದೆ. ಹೀಗಾಗಿ ಇದು ಸರ್ಕಾರದ ಕೈಮೀರುವ ಹಂತದಲ್ಲಿದ್ದು, ಈಗಲೂ ಜನ ಜಾಗೃತವಾಗದಿದ್ದರೆ ಮುಂದಿನ ಸ್ಥಿತ ಘೋರವಾಗಿರಲಿದೆ.
ಕೂಡಲೇ ಜನ ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳುವದು ಒಳಿತು. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಬಳಸಬೇಕು. ರೋಗನಿರೊಧಕ ಶಕ್ತಿ ಹೆಚ್ವಾಗುವಂಥ ಆಯುರ್ವೇದ ಔಷಧಿ ಸೇವನೆ ಮಾಡಬೇಕು ಶುಚಿತ್ವ ಬಿಸಿಯಾದ ಆಹಾರವೇ ಸೇವಿಸಬೇಕು.
ಅನಗತ್ಯ ವಾಗಿ ಯಾರ ಹೊರಗಡೆ ಬಾರದಿರುವದೇ ಉತ್ತಮ ಮದ್ದು ಎಂಬುದನ್ನು ಎಲ್ಲರೂ ಅರಿಯಬೇಕಿದೆ. ದಯವಿಟ್ಟು ನಾಗರಿಕರು ಮನೆಯಲ್ಲಿಯೇ ಉಳಿದರೆ ಕೊರೊನಾ ವಿರುದ್ಧ ಹೋರಾಟ ನಡೆಸಿದಂತೆ, ತಮ್ಮ ತಮ್ಮ ಜೀವ ರಕ್ಷಣೆಗೆ ನಿಯಮಗಳನ್ನು ಪಾಲಿಸಬೇಕು ಎಂದು ವಿನಯವಾಣಿ ವಿನಂತಿಸುತ್ತದೆ.