ಪ್ರಮುಖ ಸುದ್ದಿ

ಕೃಷಿ ಪರಿಕರ ಮಾರಾಟಗಾರರ ಸಂಘದಿಂದ 11 ಲಕ್ಷ ರೂ.ದೇಣಿಗೆ

ಶಹಾಪುರಃ ಕೊರೊನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘ ಮತ್ತು ಕೃಷಿಕ ಸಮಾಜದ ವತಿಯಿಂದ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ 11,11,111 ರೂ.(ಹನ್ನೊಂದು ಲಕ್ಷ ಹನ್ನೊಂದು ಸಾವಿರ ನೂರಾಹನ್ನೊಂದು) ಚಕ್‍ನ್ನು ಯಾದಗಿರಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ದೇವಿಕಾ ಅವರಿಗೆ ನೀಡಿದರು.

ನಗರದ ಕೃಷಿ ಇಲಾಖೆ ಕಚೇರಿಯಲ್ಲಿ ಚಕ್ ನೀಡಿ ಮಾತನಾಡಿದ ಕೃಷಿಕ ಸಮಾಜದ ರಾಜ್ಯ ಅಧ್ಯಕ್ಷ ಬಸನಗೌಡ ಮರಕಲ್, ರಾಜ್ಯ ಸಂಕಟದಲ್ಲಿರುವಾಗ ಕೃಷಿ ಪರಿಕರಗಳ ಮಾರಾಟಗಾರು ಹಾಗೂ ಕೃಷಿಕ ಸಮಾಜದಿಂದ ಕೈಲಾದ ಸಹಾಯ ಹಸ್ತ ನೀಡಬೇಕೆಂದು ಎಲ್ಲರೂ ಇಚ್ಛಿಸಿರುವದರಿಂದ ಸಿಎಂ ಪರಿಹಾರ ನಿಧಿಗೆ ಈ ಹಣವನ್ನು ನೀಡುತ್ತಿದ್ದೇವೆ.
ಕೊರೊನಾ ತಡೆಗೆ ವಿವಿಧ ಬಗೆಯ ಸಹಕಾರವನ್ನು ಅಧಿಕಾರಿಗಳು, ಖಾಸಗಿ ಸಂಘ ಸಂಸ್ಥೆಗಳು, ಉದ್ಯಮಿಗಳು ಸೇರಿದಂತೆ ನಾಗರಿಕರು ಕೈಜೋಡಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾರಾಟಗಾರರ ಸಂಘದ ಅಧ್ಯಕ್ಷ ಅಶೋಕರಡ್ಡಿ ಲಿಂಗದಳ್ಳಿ, ಸುರಪುರ ಅಧ್ಯಕ್ಷ ಸಿದ್ರಾಮರಡ್ಡಿ ಪಾಟೀಲ್ ಕೆಂಭಾವಿ, ಶರಣಬಸ್ಸಪ್ಪ ದಿಗ್ಗಾಂವಿ, ಹುಣಸಗಿ ಅಧ್ಯಕ್ಷ ಸಂಗಣ್ಣ, ಸದಸ್ಯರಾದ ಶರಣಗೌಡ ವಜ್ಜಲ, ವಿಧ್ಯಾಸಾಗರ ಶೇಟಿ, ಶಿವುಕುಮಾರ ಗುರಮಿಟ್ಕಲ್, ಪಾಂಡುರಂಗ ಪಾಲಾದಿ, ಅಮೀನರಡ್ಡಿ ಪಾಟೀಲ್, ಮಂಜುನಾಥ ಜಾಲಹಳ್ಳಿ, ಸಂಗನಗೌಡ ಪಾಟೀಲ್, ದೇವಾನಂದ ಪಾಟೀಲ್, ಬಸವರಾಜ ವಸ್ತ್ರದ, ರಮೇಶ ಮಾಗನೂರ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button