24 ಗಂಟೆ 100 ಸಾವು, ಸೋಂಕಿತರ ಸಂಖ್ಯೆ 81,970 ಕ್ಕೆ ಏರಿಕೆ
24 ಗಂಟೆ 100 ಸಾವು, ಸೋಂಕಿತರ ಸಂಖ್ಯೆ 81,970 ಕ್ಕೆ ಏರಿಕೆ-
ಶೈಕ್ಷಣಿಕ ವಲಯದಲ್ಲಿ ಆತಂಕ, ಪಾಲಕರಲ್ಲಿ ದುಗುಡ
ಭಾರತದಲ್ಲಿ ದಿನೇ ದಿನೇ ಕೊರೊನಾ ಮರಣ ಮೃದಂಗ ಹೆಚ್ಚಾಗ್ತಿದೆ. ಈ ನಡುವೆ ಕೈಕಟ್ಟಿ ಮನೆಯಲ್ಲಿ ಕೂಡುವದು ಕಷ್ಟಕರ.
ನಮ್ಮ ಪ್ರಧಾನಿ ಅವರು ಹೇಳಿದಂತೆ ಬದಲಾವಣೆಯೊಂದಿಗೆ ಜೀವನ ನಡೆಸುವದು ಅನಿವಾರ್ಯ. ಕೆಲವು ಮುಂಜಾಗೃತ ಕ್ರಮಗಳನ್ನು ಅನುಸರಿಸುತ್ತಾ ಬದುಕು ಸಾಗಿಸಬೇಕಿದೆ. ದೇಶದ ಆರ್ಥಿಕ ಅಭಿವೃದ್ಧಿ ಯತ್ತವು ಚಿತ್ತ ಹರಿಸಬೇಕಿದೆ. ಆತಂಕಕ್ಕೊಳ ಪಡದೆ ಮುಂದುವರಿಯಬೇಕು ಎಂದು ಹೇಳಿದ್ದು, ಜನ ಸಂಕಷ್ಟದ ನಡುವೆಯೇ ಜೀವನ ಸುಧಾರಿಸಿಕೊಳ್ಳಲು ಮುಂದಾಗಿದ್ದಾರೆ.
ಲಾಕ್ ಡೌನ್ ಕೊಂಚ ಸಡಿಲಿಕೆ ಮಾಡಿದ್ದು ಜನ ಜೀವನದಲ್ಲಿ ಒಂದಿಷ್ಟು ಚೇತರಿಕೆ ಕಂಡುಬಂದಿದ್ದು ಒಂದಡೆಯಾದರೆ ಕೊರೊನಾ ತನ್ನ ಆಟವನ್ನು ಮತ್ತಷ್ಟು ಮುಂದುಬರೆಸಿದೆ.
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ವಾಗುತ್ತಲೇ ಇದೆ. ಇಂದು ಒಂದೇ ದಿನ ಕಳೆದ 24 ಗಂಟೆಯಲ್ಲಿ 3,967 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮತ್ತು 24 ಗಂಟೆಯಲ್ಲಿ ದೇಶದ್ಯಾಂತ ಕೊರೊನಾ ಸೋಂಕಿಗೆ 100 ಜನ ಮೃತಪಟ್ಟಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಕ್ಯೆ 81 ಸಾವಿರ 970 ಕ್ಕೆ ಏರಿಕೆಯಾಗಿದೆ. ಮುಂಬರುವ ದಿನ ಇನ್ನಷ್ಟು ಸಂಕಟ ಎದುರಿಸಬೇಕಾಗುತ್ತದೆ. ಕೊರೊನಾ ವಿಶ್ವದಾದ್ಯಂತ ತನ್ನ ಕಬಂಧ ಬಾಹು ಚಾಚಿಕೊಂಡಿದೆ. ಕೊರೊನಾಗೆ ಸಮರ್ಪಕ ಔಷಧಿ ದೊರೆಯುವವರೆಗೂ ದೇಶದ ಜನರ ಸಂಕಟ ದುಸ್ಥಿತಿ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಮೇ.17 ರಂದು ಲಾಕ್ ಡೌನ್ ಮುಗಿಯಲಿದ್ದು, ಮೇ.18 ರಿಂದ ಕೆಲ ಮಾರ್ಪಾಡು ಹೊಸನೀತಿ ನಿಯಮಗಳೊಂದಿಗೆ ಜೀವನ ಅನುಸರಿಸಿಕೊಂಡು ಹೋಗಬೇಕಾದ ಲಕ್ಷಣ ಕಂಡು ಬರುತ್ತಿದೆ. ಮತ್ತು ಪ್ರಧಾನಿಯವರು ಹೊಸನೀತಿ ಬದಲಾವಣೆಯೊಂದಿಗೆ ಜೀವನ ಪದ್ಧತಿ ರೂಢಿಸಿಕೊಳ್ಳಬೇಕೆಂಬ ಸುಳಿವು ನೀಡಿರುವದು ನೋಡಿದರೆ, ಕೊರೊನಾ ತಡೆಕ್ರಮದೊಂದಿಗೆ ಎಲ್ಲಾ ಕೆಲಸ ಕಾರ್ಯಗಳು ನಡೆಸಿಕೊಂಡು ಹೋಗುವದು ಅನಿವಾರ್ಯ ವಾಗಿದೆ.
ಆದರೆ ಮಕ್ಕಳ ಶೈಕ್ಷಣಿಕ ವಿಷಯ ಬಂದಾಗ ಪಾಲಕರಲ್ಲಿ ದುಗುಡ ಹೆಚ್ವಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಕೊರೊನಾ ಎಲ್ಲಿಂದ ಬಂತೋ ಎಂಬ ಬೇಸರದ ಅಸಹಾಯಕತೆಯ ಮಾತುಗಳು ಈಗ ಎಲ್ಲೆಡೆ ಕೇಳಿ ಬರುತ್ತಿದೆ.
ಕೂಡಲೇ ಕೊರೊನಾ ಸೋಂಕು ನಿವಾರಣೆಗೆ ಸೂಕ್ತ ದಿವ್ಯ ಔಷಧಿ ದೊರೆಯಲಿ ಪ್ರಪಂಚದಾದ್ಯಂತ ಆವರಿಸಿದ ಕೊರೊನಾ ಕರಿ ನೆರಳು ಬೇಗನೆ ಮಾಯವಾಗಿ ಜನಜೀವನ ಯಥಾಸ್ಥಿತಿಗೆ ಬರಲಿ ಎಂದು ವಿನಯವಾಣಿ ಪ್ರಾರ್ಥಿಸುತ್ತದೆ.
–ಸಂಪಾದಕರು.ವಿನಯವಾಣಿ.