ಶಹಾಪುರದಲ್ಲಿ ಕೊರೊನಾ ತೀವ್ರತೆ ಜಾಸ್ತಿ. ಮುನ್ನೆಚ್ಚರಿಕೆ ವಹಿಸಿ -ಶಿರವಾಳ
ಕೋವಿಡ್-19 ತಡೆಗೆ ಸೂಕ್ತ ಕ್ರಮ ಅಗತ್ಯ- ಶಿರವಾಳ
ಕೋವಿಡ್ ಬಗ್ಗೆ ನಿರ್ಲಕ್ಷ ಸಲ್ಲದು, ಮಾರ್ಗಸೂಚಿ ಪಾಲಿಸಿ-ಶಿರವಾಳ
yadgiri, ಶಹಾಪುರಃ ಜಿಲ್ಲೆಯಾದ್ಯಂತ ಮಹಾಮಾರಿ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಶಹಾಪುರ ಕ್ಷೇತ್ರದಲ್ಲಿ ಅದರ ತೀವ್ರತೆ ಇನ್ನೂ ಹೆಚ್ಚಿದೆ. ಅಲ್ಲದೆ ತಾಲೂಕಿನಲ್ಲಿ ಈಗಾಗಲೇ ಕೆಲ ಹಿರಿಯರನ್ನು ಕಳೆದುಕೊಂಡಿದ್ದೇವೆ ಎಂದು ವಿಷಾಧಿಸಿದ ಅವರು, ಇನ್ನಾದರೂ ನಾಗರಿಕರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ತಾಲೂಕು ಆಡಳಿತವು ಮುತುವರ್ಜಿವಹಿಸಬೇಕಿದೆ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದರು.
ಉದಯವಾಣಿಯೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಕೊರೊನಾ ಹಾವಳಿ ಜಾಸ್ತಿಯಾಗಿದ್ದು, ನಗರದ ಎಲ್ಲಾ ವ್ಯಾಪಾರಸ್ಥರು, ಪ್ರಮುಖರು ಮತ್ತು ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲಾ ಬಗೆಯ ವ್ಯಾಪಾರಿಗಳು ಕೊರೊನಾ ತಡೆಗೆ ಬೇಕಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ನಾಗರಿಕರು ಸಹ ಆರೋಗ್ಯ ಇಲಾಖೆ ಸೂಚಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೊರೊನಾ ಬಗ್ಗೆ ಹಲವಾರು ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣುತ್ತೇವೆ. ಈ ಬಗ್ಗೆ ಯಾರೊಬ್ಬರು ನಿರ್ಲಕ್ಷವಹಿಸದೆ ಕಟ್ಟುನಿಟ್ಟಾಗಿ ಕೊರೊನಾ ತಡೆಗೆ ಸೂಚಿಸಿದ ನಿಯಮಗಳನ್ನು ಪಾಲಿಸುವ ಮೂಲಕ ಕೊರೊನಾ ತೀವ್ರತೆಗೆ ಬ್ರೇಕ್ ಹಾಕಬೇಕಿದೆ.
ಶಹಾಪುರ ಜನತೆಯಲ್ಲಿ ಮನವಿ ಮಾಡುತ್ತಾ ಯಾರೊಬ್ಬರು ನಿರ್ಲಕ್ಷವಹಿಸದೆ, ಅಗತ್ಯವಿದ್ದಲ್ಲಿ ಮಾತ್ರ ಹೊರಗಡೆ ಬನ್ನಿ. ಅದು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಬೇಕು. ಯಾರಿಗಾದರೂ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ. ಪಾಸಿಟಿವ್ ಬಂದಿದೆ ಎಂದು ಭಯಪಡುವ ಅಗತ್ಯವಿಲ್ಲ. ಅದನ್ನು ಆರಂಭದಲ್ಲಿ ಕಂಡುಕೊಂಡಲ್ಲಿ ಸಮರ್ಪಕ ಚಿಕಿತ್ಸೆ ದೊರೆಯಲಿದೆ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಭಾಜಪ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಗಂಗಾಧರಮಠ, ಅಪ್ಪಣ್ಣ ದಶವಂತ ಇತರರಿದ್ದರು.
ಜನರು ನಾಗರಿಕ ಪ್ರಜ್ಞೆಯೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರ ಮೂಲಕ ಕೊರೊನಾ ತಡೆಗಟ್ಟಲು ಶ್ರಮಿಸಬೇಕು. ಈ ಹಿನ್ನೆಲೆಯಲ್ಲಿ ನಿಮ್ಮ ವಿಚಾರಗಳು ಪ್ರಸ್ತುತವಾಗುತ್ತವೆ ಸರ್.