ಪ್ರಮುಖ ಸುದ್ದಿ

ಶಹಾಪುರಃ ಕೊರೊನಾಗೆ ಮತ್ತೊಂದು ಬಲಿ.!

ಶಹಾಪುರಃ ಕೊರೊನಾಗೆ ಮತ್ತೊಂದು ಬಲಿ.!

yadgiri, ಶಹಾಪುರಃ ಪಟ್ಟಣದ ಲಕ್ಷ್ಮೀ ನಗರ ನಿವಾಸಿ 69 ವಯಸ್ಸಿನ ಓರ್ವ ಕೊರೊನಾಗೆ ಬಲಿಯಾದ ಘಟನೆ ನಡೆದಿದೆ. ತೀವ್ರ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ ಇವರನ್ನು ಆಸ್ಪತ್ರೆಗೆ ಕರೆದೊಯ್ಯದಾಗ ಕೋವಿಡ್ ಟೆಸ್ಟ್ ಮಾಡಿಸಲಾಗಿ ಕೊರೊನಾ ಪಾಸಿಟಿವ್ ದೃಡ ಪಟ್ಟಿತ್ತು.

ಕಳೆದ ಎರಡು ದಿನದಿಂದ ಯಾದಗಿರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ಅವರ ಸ್ವಗ್ರಾಮದಲ್ಲಿ ಕೊರೊನಾ ನಿಯಮಾವಳಿಯಂತೆ ಸಂಸ್ಕಾರ ಮಾಡಲಾಗಿದೆ. ಕುಟುಂಬಸ್ಥರಿಗೂ ಕೋವಿಡ್ ಟೆಸ್ಟ್ ಮಾಡಲಾಗಿ ಪಾಸಿಟಿವ್ ವರದಿ ಬಂದಿದೆ. ಕುಟುಂಬಸ್ಥರು ಮನೆಯಲ್ಲಿಯೇ ಹೋಂಕ್ವಾರಂಟೈನ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಶಹಾಪುರ ತಾಲೂಕಿನಲ್ಲಿ ಕೊರೊನಾಗೆ ಇದು ಐದನೇಯ ಬಲಿ. ಕೊರೊನಾ ಮಹಾಮಾರಿ ತನ್ನ ಆರ್ಭಟ ಮುಂದುವರೆದಿದ್ದು, ನಗರದಲ್ಲಿ ಜನರು ಜಾಗೃತರಾಗುತ್ತಿಲ್ಲ. ಸಮರ್ಪಕವಾಗಿ ಮಾಸ್ಕ್ ಧರಿಸುವದಿಲ್ಲ. ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಗುಂಪಾಗಿ ಸಂಚರಿಸುತ್ತಿರುವದು ಸದಾ ಜನ ಜಂಗುಳಿಯಿಂದ ಕೂಡಿರುವದು ಕಂಡು ಬರುತ್ತದೆ. ಈ ಕುರಿತು ತಾಲೂಕಾಡಳಿತ ಸೂಕ್ತ ಕ್ರಮಕೈಗೊಳ್ಳುವ ಅಗತ್ಯವಿದೆ.
———————-

Related Articles

Leave a Reply

Your email address will not be published. Required fields are marked *

Back to top button