ಶಹಾಪುರ ಕ್ವಾರಂಟೈನ್‍ನಿಂದ ಮಹಾ ಕೊರೊನಾ ಸ್ಪೋಟ- 54 ಜನರಿಗೆ ಕೊರೊನಾ ಸೋಂಕು
ವಲಸೆ ಕಾರ್ಮಿಕರಿದ್ದ ಕ್ವಾರಂಟೈನ್‍ನಿಂದಲೇ ಕೊರೊನಾ ಸ್ಪೋಟ
ಜಿಲ್ಲೆಯಲ್ಲಿ 72 ಕೊರೊನಾ ಸೋಂಕು ದೃಢ
8 ಮಕ್ಕಳು ಸೇರಿ 54 ಜನರಿಗೆ ಕೊರೊನಾ ಸೋಂಕು ನಗರದಲ್ಲಿ ಹೆಚ್ಚಿದ ಆತಂಕ
ಶಹಾಪುರಃ ಕೊರೊನಾ ಹಾವಳಿಯಿಂದ ಭಯಗೊಂಡು ಸ್ವಗ್ರಾಮಕ್ಕೆ ಬಿಡಿಯಿಂದ ಎಂದು ಮಹಾರಾಷ್ಟ್ರದಿಂದ ತಾಲೂಕಿನ ವಿವಿಧ ಗ್ರಾಮದ ನಿವಾಸಿಗಳು ಮುಂಬಯಿಂದ ವಲಸೆ ಕಾರ್ಮಿಕರು ಶಹಾಪುರಕ್ಕೆ ಆಗಮಿಸಿದ್ದರು. ಇವರನ್ನೆಲ್ಲ ಇಲ್ಲಿನ ಜಿಲ್ಲಾಡಳಿತ ಕ್ವಾರಂಟೈನ್ ನಲ್ಲಿ ಡಿಉವ ವ್ಯವಸ್ಥೆ ಮಾಡಿತ್ತು. ಇದೀಗ ಕ್ವಾರಂಟೈನ್ ಕೇಂದ್ರದಿಂದಲೇ ಕೊರೊನಾ ಮಹಾ ಸ್ಪೋಟಗೊಂಡಿದೆ.
ಮೊನ್ನೆ ಕನ್ಯಾಕೋಳೂರ ಗ್ರಾಮದಲ್ಲಿ ಎರಡು ಪ್ರಕರಣ ಮತ್ತು ತಾಲೂಕಿನ ಚಂದಾಪುರ ಗ್ರಾಮದ ಒಂದು ಪ್ರಕರಣ ಪತ್ತೆಯಾಗಿತ್ತು. ಇದೀಗ ಶಹಪುರ ಹೊರವಲಯದ ಕನ್ಯಾಕೋಳೂರ ಗ್ರಾಮ ರಸ್ತೆಯಲ್ಲಿರುವ ಬಿಸಿಎಂ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಕ್ವಾರಂಟೈನ್ ಕೇಂದ್ರದಲ್ಲಿಯೇ 8 ಮಕ್ಕಳು ಸೇರಿದಂತೆ ಒಟ್ಟು 54 ಜನರಿಗೆ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ.
ಇದರಿಂದ ಇಡಿ ಶಹಾಪುರ ಬೆಚ್ಚಿಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಶುಕ್ರವಾರ ಪತ್ತೆಯಾದ 54 ಪ್ರಕರಣಗಳು ಸೇರಿದಂತೆ ಈ ಮೊದಲಿನ 5 ಪ್ರಕರಣಗಳು ಒಟ್ಟು ಶಹಾಪುರ ತಾಲೂಕಿನಲ್ಲಿ 59 ಪ್ರಕರಣಗಳು ದೃಢಪಟ್ಟಂತಾಗಿದೆ. ಒಟ್ಟು ಜಿಲ್ಲೆಯಲ್ಲಿ 87 ಪ್ರಕರಣಗಳು ದೃಢಪಟ್ಟ ವರದಿ ಶುಕ್ರವಾರ ಆರೋಗ್ಯ ಇಲಾಕೆಯಿಂದ ತಿಳಿದು ಬಂದಿದೆ.
ಶಹಾಪುರದ ಕ್ವಾರಂಟೈನ್‍ನಲ್ಲಿ ಶುಕ್ರವಾರ ದೃಢಪಟ್ಟ ಒಟ್ಟು 54 ಹೊಸ ಪ್ರಕರಣಗಳು ಯಾದಗಿರಿ ತಾಲೂಕಿನ ಅಲಿಪುರ ತಾಂಡಾ ನಿವಾಸಿಗಳೆಂದು ತಿಳಿದು ಬಂದಿದೆ. ಕಳೆದ ಎರಡು ವಾರಗಳಿಂದ ಇವರನ್ನು ಕ್ನಯಾಕೋಳೂರ ಗ್ರಾಮಕ್ಕೆ ತೆರಳುವ ವಸತಿ ನಿಲಯದ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು. ಒಂದೇ ಕೇಂದ್ರದಲ್ಲಿ 107 ಜನರಿದ್ದು ಅದರಲ್ಲಿ 54 ಜನರಿಗೆ ಕೊರೊನಾ ಸೋಂಕು ತಗುಲಿರುವದು ತಿಳಿದು ಬಂದಿದೆ. ಮೇ.18 ರಂದು ಮೂವರಿಗೆ ಮತ್ತು ಮೇ.19 ರಂದು ಇಬ್ಬರಿಗೆ ಕೊರೊನಾ ತಗುಲಿರುವ ಪ್ರಕರಣ ಪತ್ತೆಯಾಗಿದ್ದವು.
ಕನ್ಯಾಕೋಳೂರ ಗ್ರಾಮದಲ್ಲಿ ಎರಡು ದಿನ ಉಳಿದಿದ್ದ ಕಾರ್ಮಿಕರಿಬ್ಬರಿಗೂ ಸೋಂಕು ತಗುಲಿರುವದು ವರದಿಯಾಗಿತ್ತು. ಅವರು ಎರಡು ದಿನ ಗ್ರಾಮದಲ್ಲಿ ಓಡಾಡಿದ್ದರು. ನಂತರ ಕ್ವಾರಂಟೈನ್‍ಗೆ ಕಳುಹಿಸಲಾಗಿತ್ತು. ಕಿತ್ತೂರ ರಾಣಿ ಚನ್ನಮ್ಮ ಕ್ವಾರಂಟೈನ್‍ನಲ್ಲಿ ಓರ್ವ ಕಾರ್ಮಿಕನಿಗೆ ಚಂದಾಪುರ ಗ್ರಾಮದವನಿಗೆ ಸೋಂಕು ತಗುಲಿತ್ತು. ಒಟ್ಟು ಶಹಾಪುರದಲ್ಲಿ ಸೋಂಕಿತರ ಸಂಖ್ಯೆ 59 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 87 ಕ್ಕೆ ಏರಿದೆ. ಹೀಗಾಗಿ ಜಿಲ್ಲೆಯ ಜನ ಆತಂಕದ ಛಾಯೆಯಲ್ಲಿ ಕಾಲಕಳೆಯುವಂತಾಗಿದೆ.
ನಗರದಲ್ಲಿ ಒಟ್ಟು ಅಂದಾಜು 9 ವಸತಿ ಶಾಲೆ ಸೇರಿದಂತೆ ವಿವಿಧ ಗ್ರಾಪಂ ವ್ಯಾಪ್ತಿಯ ಶಾಲೆಗಳಲ್ಲಿ ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಇದುವರೆಗೂ ಸುಮಾರು 3 ಸಾವಿರಕ್ಕೂ ಹೆಚ್ಚು ವಲಸಿಗ ಕಾರ್ಮಿಕರನ್ನು ಕ್ವಾರಂಟೈನ್ಗಳಲ್ಲಿ ಇರುವ ವ್ಯವಸ್ಥೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಕ್ವಾರಂಟೈನ್ ನಲ್ಲಿರುವ ಎಲ್ಲರಿಗೂ ಗಂಟಲು ದ್ರವ ಮತ್ತು ರಕ್ತ ಮಾದರಿ ಪರೀಕ್ಷೆ ಮಾಡಬೇಕಿದೆ. ಹೀಗಾಗಿ ಸೋಂಕಿತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.