ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕೊರೊನಾ ದೃಢ- ಶಿಕ್ಷಣ ಇಲಾಖೆ ಎಡವಟ್ಟು
ಹಾಸನಃ ಎಸ್ಸೆಸ್ಸೆಲ್ಸಿ ಮೊದಲ ದಿನ ಪರೀಕ್ಷೆಯಲ್ಲಿ ಹಾಜರಾಗಿ ಪೇಪರ ಬಿಡಿಸಿದ್ದ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ದೃಢ ವರದಿ ಬಂದ ಹಿನ್ನೆಲೆ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಪಟ್ಟಣ ಗ್ರಾಮದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಆತಂಕ ತುಂಬಿದೆ.
ಮೊದಲ ಪೇಪರ್ ಬರೆದಿದ್ದ ವಿದ್ಯಾರ್ಥಿ ಜ್ವರದಿಂದ ಬಳಲುತ್ತಿರುವ ಕಾರಣ, ಆತನ ಗಂಟಲು ದ್ರವ ಹಾಗೂ ರಕ್ತ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು.
ಇಂದು ಆ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ದೃಢವಾಗಿರುವ ವರದಿ ಬಂದಿದೆ. ಆದಾಗ್ಯ ಹಾಸನ ತಾಲೂಕಾ ಆಡಳಿತ, ಶಿಕ್ಷಣ ಇಲಾಖೆ ಇಂದು ಅದೇ ವಿದ್ಯಾರ್ಥಿಯನ್ನು ಎರಡನೇ ಪೇಪರ್ ಗಣಿತ ಪರೀಕ್ಷೆಗೆ ಯಾವುದೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡದೆ 18 ವಿದ್ಯಾರ್ಥಿಗಳಿರುವ ಅದೇ ಕೊಠಡಿಯಲ್ಲಿ ಪರೀಕ್ಷೆ ಬರೆದಿರುವದು ಕೊಠಡಿಯಲ್ಲಿ ಕುಳಿತ ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಆತಂಕ ವ್ಯಕ್ಯವಾಗಿದೆ.
ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ಕುರಿತು ಹಾಸನ ಜಿಲ್ಲಾಡಳಿತದ ವಿರುದ್ದ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.