ಶಹಾಪುರಃ ಹಿರಿಯ ಜೀವಿ ಸುಮಂಗಲ ದಿಗ್ಗಾವಿ (65) ನಿಧನ
ಸುಮಂಗಲ ದಿಗ್ಗಾವಿ (65) ನಿಧನ
ಶಹಾಪುರಃ ದಿನೇಶ ಫೂಟ್ ವೇರ್ ಮಾಲೀಕ ಲಕ್ಷ್ಮಣ ದಿಗ್ಗಾವಿ ಅವರ ತಾಯಿ ಸುಮಂಗಲ ದಿಗ್ಗಾವಿ(65) ಇಂದು ಬೆಳಗಿನ ಜಾವ ನಿಧನರಾದರು ಎಂದು ತಿಳಿಸಲು ವಿಷಾಧಿಸುತ್ತೇವೆ.
ಪ್ರತಿಷ್ಠಿತ ದಿಗ್ಗಾವಿ ಕುಟುಂಬದ ಹಿರಿಯಳಾಗಿದ್ದ ಸುಮಂಗಲ ದಿಗ್ಗಾವಿ ಕುಟುಂಬದ ಆಧಾರಸ್ಥಂಭವಾಗಿದ್ದಳು.
ನಗರದಲ್ಲಿ ದಿಗ್ಗಾವಿ ಕುಟುಂಬ ಹಲವು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಅದರಲ್ಲಿ ದಿನೇಶ ಫೂಟವೇರ್, ದಿನೇಶ ಟೆಂಟ್ ಹೌಸ್ ಮತ್ತು ಗೋಲ್ಡ್ ವ್ಯಾಪಾರ ಸೇರಿದಂತೆ ನಗರದಲ್ಲಿಯೇ ದೊಡ್ಡ ಪ್ರಮಾಣದಿ ಚಪ್ಪಲಿ ತಯಾರಿಸುವ ಘಟಕ ಸ್ಥಾಪನೆ ಮಾಡಿದ್ದು, ಈ ಎಲ್ಲಾ ಉದ್ಯಮಗಳ ಬೆಳವಣಿಗೆಗೆ ಬೆಂಬಲವಾಗಿ ಸದಾ ಹರಸುತ್ತಿದ್ದ, ಕುಟುಂಬಕ್ಕೆ ಆಧಾರವಾಗಿದ್ದ ತಾಯಿ ಸುಮಂಗಲ ಗಂಡ ಚಂದಪ್ಪ ದಿಗ್ಗಾವಿ(65) ಇಂದು ಬೆಳಗಿನಜಾವ ಇಹಲೋಕ ತ್ಯೇಜಿಸಿದ್ದಾರೆ.
ಸುಮಾರು 65 ವಯಸ್ಸಿನವರಾದ ಸುಮಂಗಲ ದಿಗ್ಗಾವಿ ನಿಧನದಿಂದ ಸಮಸ್ತ ಕುಟುಂಬ ಸಮಾಜ ಬಾಂಧವರು ದುಖಃತಪ್ತರಾಗಿದ್ದಾರೆ.
ಮನೆಯೊಡತಿ ಸುಮಂಗಲ ದಿಗ್ಗಾವಿ ಇನ್ನಿಲ್ಲ ಎಂಬುದನ್ನು ಊಹಿಸಿಕೊಳ್ಳಲಾಗುತ್ತಿಲ್ಲ ಎಂದು ಸಮಾಜದ ಮಹಿಳೆಯರು, ಹಿರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರು ನಾಲ್ಕು ಗಂಡು ಮಕ್ಕಳು ಓರ್ವ ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.