ಸ್ಮಶಾನ ಗುಂಡಿಗೆ ಇಳಿದು ಶವದ ಗಂಟಲು ದ್ರವ ತೆಗೆದ ಗಟ್ಟಿಗಿತ್ತಿ ಯಾರು ಗೊತ್ತೆ.?
ಸ್ಮಶಾನದ ಗುಂಡಿಗೆ ಇಳಿದು ಶವದ ಗಂಟಲು ದ್ರವ ತೆಗೆದ ಶೋಭಾ
ಹಾವೇರಿಃ ಸ್ಮಶಾನದ ಗುಂಡಿಗೆ ಇಳಿದು ಶವದ ಬಾಯಿ ತೆಗೆದು ಗಂಟಲು ದ್ರವ ಸಂಗ್ರಹಿಸಿದ ಘಟನೆ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದಲ್ಲಿ ನಡೆದಿದೆ.
ಲ್ಯಾಬ್ ಟಿಕ್ನಿಶಿಯನ್ ಶೋಭಾ ಎಂಬ ಮಹಿಳೆಯೇ ಈ ಗಟ್ಟಿತನವನ್ನು ತೋರುವ ಮೂಲಕ ಕೊರೊನಾ ವಾರಿಯರ್ಸ್ ಕರ್ತವ್ಯವನ್ನು ನಿಭಾಯಿಸಿ ನೆರೆದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೋಮವಾರ ಹಿರೇಮುಗದೂರ ಗ್ರಾಮದ 70 ವರ್ಷದ ವ್ಯಕ್ತಿ ಯೊಬ್ಬರು ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದರು.
ಕುಟುಂಬದವರು ಮಂಗಳವಾರ ಶವ ಸಂಸ್ಕಾರ ನಡೆಸಲು ಮುಂದಾಗಿದ್ದರು, ಸ್ಮಶಾನದಲ್ಲಿ ಗುಂಡಿ ತೋಡಿಸಿ ಶವವಿಟ್ಟು ಸಂಸ್ಕಾರದ ಪ್ರಕ್ರಿಯೇಯಲ್ಲಿದ್ದು ಇನ್ನೇನು ಮುಗಿಸಿ ಮಣ್ಣು ಹಾಕಬೇಕು ಎನ್ನುವಷ್ಟರಲ್ಲಿ ಮೃತಪಟ್ಟಿದ್ದ ಸುದ್ದಿ ತಡವಾಗಿ ತಿಳಿದು ಗಂಟಲು ದ್ರವ ಪರೀಕ್ಷೆಗೆ ಆರೋಗ್ಯ ಇಲಾಖೆ ಪ್ರಯೋಗಾಲಯಕ್ಕೆ ತಿಳಿಸಿತ್ತು.
ಪ್ರಯೋಗಾಲಯದ ತಂತ್ರಜ್ಞೆ ಶೋಭಾ ಬರುವಷ್ಟರಲ್ಲಿ ಶವ ಸಂಸ್ಕಾರ ವಿಧಿವಿಧಾನ ಕಾರ್ಯ ಮುಗಿಸಿ ಮಣ್ಣು ಹಾಕುವದೊಂದೆ ಬಾಕಿ ಉಳಿದಿತ್ತು. ದಿಡೀರನೆ ಆಮಿಸಿದ ಕೊರೊನಾ ವಾರಿಯರ್ಸ್ ಮಹಿಳೆ ಶೋಭಾ ಧೈರ್ಯ ದಿಂದ ಸ್ಮಶಾನದ ಗುಂಡಿಗೆ ಇಳಿದು ಶವದ ಬಾಯಿ ತೆಗೆದು ಗಂಟಲು ದ್ರವ ತೆಗೆದುಕೊಂಡು ಮರಳಿದರು.
ಈಚೆಗೆ ಸವಣೂರಿನಲ್ಲಿ ಎರಡು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದವು, ಸೋಂಕಿತರಿಗೆ ತಪಾಸಣೆ ಮಾಡಿದ್ದ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ ಕ್ವಾರಂಟೈನ್ ನಲ್ಲಿದ್ದರು. ಇಂತಹ ಸಂದರ್ಭದಲ್ಲಿ ಪಾಸಿಟಿವ್ ಪತ್ತೆಯಾದ ಪ್ರದೇಶದಲ್ಲಿ ಯಾರೇ ಮೃತಪಟ್ಟಿದ್ದರು ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲೇಬೇಕಿತ್ತು.
ಹೀಗಾಗಿ ವೈದ್ಯ, ನರ್ಸ್ ಸಿಬ್ಬಂದಿ ಯಾರು ಇರದ ಕಾರಣ, ಇದ್ದವರು ಕ್ವಾರಂಟೈನ್ ನಲ್ಲಿರುವ ಹಿನ್ನೆಲೆ ಶು ಟೆಕ್ನಿಶಿಯನ್ ಶೋಭಾ ಅವರು ಈ ಸಾಹಸಕ್ಕೆ ಇಳಿದಿದ್ದರು.
ಶುಶ್ರೂಷಕಿಯೂ ಅಲ್ಲದ ಆರೋಗ್ಯ, ಆಶಾ ಕಾರ್ಯಕರ್ತೆ ಯೂ ಅಲ್ಲದೆ ಶೋಭಾ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಇಂತಹ ಸಂದರ್ಭದಲ್ಲಿ ಸಮರ್ಪಕವಾಗಿ ಕರ್ತವ್ಯ ನಿಭಾಯಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದರು.