ಪ್ರಮುಖ ಸುದ್ದಿ
ಪ್ರವಾಹ : ಕೌಳುರು ಬಳಿ ತಮ್ಮನೆದುರೇ ಅಣ್ಣ ನೀರುಪಾಲು!
(ಸಾಂದರ್ಭಿಕ ಚಿತ್ರ)
ಯಾದಗಿರಿ: ಮಹಾರಾಷ್ಟ್ರದಲ್ಲಿ ಮಹಾಮಳೆ ಸುರಿದ ಪರಿಣಾಮ ಅಲ್ಲಿನ ಜಲಾಶಯಗಳು ಭರ್ತಿ ಆಗಿದ್ದು ನೀರು ಬಿಡುಗಡೆ ಮಾಡಲಾಗಿದ್ದು ಕರ್ನಾಟಕದ ನದಿಗಳೂ ಉಕ್ಕಿ ಹರಿಯುತ್ತಿವೆ. ಯಾದಗಿರಿ ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿತೀರದಲ್ಲಿ ಪ್ರವಾಹ ಸೃಷ್ಠಿ ಆಗಿದೆ. ಇದೇ ವೇಳೆ ಯಾದಗಿರಿ ತಾಲೂಕಿನ ಕೌಳುರು ಗ್ರಾಮದ ಬಳಿ ನದಿತೀರದಲ್ಲಿದ್ದ ಪಂಪ್ ಸೆಟ್ ತೆರವುಗೊಳಸಲು ಹೋದ ಸಾಬರೆಡ್ಡಿ ಡೊಂಗೇರ್ ನೀರುಪಾಲಾದ ಘಟನೆ ನಡೆದಿದೆ. ಸಾಬರೆಡ್ಡಿ ಸಹೋದರ ಹಾಗೂ ಗ್ರಾಮಸ್ಥರು ಸಾಬರೆಡ್ಡಿ ಅವರನ್ನು ಹಗ್ಗ ಹಾಕಿ ಉಳಿಸಿಕೊಳ್ಳಲು ಯತ್ನಿಸಿದಾಗ ಹಗ್ಗದಿಂದಾಗಿ ಎದೆಗೆ ನೋವಾಗುತ್ತಿದೆ ಬಿಟ್ಟುಬಿಡಿ ನಾನು ಈಜಿ ದಡಕ್ಕೆ ಬರುತ್ತೇನೆ ಎಂದು ಹೇಳಿದಾಗ ಹಗ್ಗ ಬಿಡಲಾಗಿದೆ. ಆದರೆ, ಸಾಬರೆಡ್ಡಿ (34) ಮಾತ್ರ ನೀರು ಪಾಲಾಗಿದ್ದು ಈವರೆಗೆ ಪತ್ತೆ ಆಗಿಲ್ಲ ಎಂದು ತಿಳಿದು ಬಂದಿದೆ.