ಪ್ರಮುಖ ಸುದ್ದಿ

ಸೋಂಕಿತ ಕಾನ್ಸಟೇಬಲ್ ಸಂಪರ್ಕ ಪಟ್ಟಿ ಹನುಮಾನ್ ಬಾಲದಂತೆ ಬೆಳೆಯಲಿದೆ.?

ಯಾದಗಿರಿಃ ಜಿಲ್ಲೆಯ ಶಹಾಪುರ ನಗರ ಠಾಣೆ ಕಾನ್ಸ್‌ಟೇಬಲ್ ಒಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೊನಾವಣೆ ಶಹಾಪುರ ನಗರ ಠಾಣೆಗೆ ಭೇಟಿ ನೀಡಿದರು.

ಠಾಣೆ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವದರಿಂದ ಇಡಿ ಠಾಣೆಗೆ ಸ್ಯಾನಿಟೈಸ್ ಮಾಡಲಾಯಿತು.

ಅಲ್ಲದೆ ಠಾಣೆಯ ಎಲ್ಲಾ ಸಿಬ್ಬಂದಿಯ ಗಂಟಲು ದ್ರವ ಮತ್ತು ರಕ್ತ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಶನಿವಾರ ಸಂಜೆವರೆಗೂ ಮಾದರಿ ಪರೀಕ್ಷಾ ವರದಿ ಬರುವ ನಿರೀಕ್ಷೆ ಇದೆ.

ಕೋವಿಡ್ ಸೋಂಕಿತ ಕಾನ್ಸ್‌ಟೇಬಲ್ ಕಚೇರಿಯಲ್ಲಿ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಆತನನ್ನು ಈಚೆಗೆ ತಾಲೂಕಿನ ಕೊಳ್ಳೂರ(ಎಂ) ಸೇತುವೆ ಹತ್ತಿರ ಚಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿತ್ತು ಎನ್ನಲಾಗಿದೆ.

ಕಾನ್ಸ್‌ಟೇಬಲ್ ಗೆ ಸೋಂಕು ನಾಗರಿಕರಲ್ಲಿ ಆತಂಕ.!

ಕಾನ್ಸ್‌ಟೇಬಲ್ ಗೆ ಸೋಂಕು ದೃಢವಾಗುತ್ತಿದ್ದಂತೆ ಪೊಲೀಸ್ ಹಾಗು ಠಾಣೆಗೆ ಸಂಪರ್ಕ ಹೊಂದಿದವರಲ್ಲಿ ಡವಡವ ಶುರುವಾಗಿದೆ.

ಸೋಂಕಿತನ‌ ಪ್ರಾಥಮಿಕ ಸಂಪರ್ಕ ಕುರಿತು ಈಗಾಗಲೇ ಹಿಸ್ಡರಿ ಕಲೆ ಹಾಕುತ್ತಿರುವ ಪೊಲೀಸರು, ದ್ವಿತೀಯ ಸಂಪರ್ಕಿತರ ಮಾಹಿತಿ ಸಹ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಚಕ್ ಪೋಸ್ಟ್ ನಲ್ಲಿ‌ ಕಾರ್ಯನಿರ್ವಹಿಸಿದ್ದರಿಂದ. ಮರಳು ಸಾಗಾಣಿಕೆ ಮಾಡುವವರ ಸಂಪರ್ಕವು ಸೋಂಕಿತನಿಗಿದೆ ಎನ್ನಲಾಗಿದೆ.

ರಾಯಲ್ಟಿ ಚಕ್ ಮಾಡೋದು ಮರಳು‌ ಟಿಪ್ಪರ್ ಸಂಖ್ಯೆ, ರಾಯಲ್ಟಿ‌ ಪತ್ರ ನೋಡುವದು ಇತರೆ ಕಾರ್ಯ‌ ಮಾಡಿದ್ದರಿಂದ‌ ಸೋಂಕಿತನ ಸಂಪರ್ಕ‌ ಹನುಮನ‌ ಬಾಲದಂತೆ ಬೆಳೆಯುವ ಸಾಧ್ಯತೆ.

ಕಾರಣ ಪೊಲೀಸರು ಶೀಘ್ರದಲ್ಲಿ ಸಂಪರ್ಕಿತರ ಪಟ್ಟಿ ತಯಾರಿಸಿ ಎಲ್ಲರನ್ನು ಕ್ವಾರಂಟೈನ್ ಮಾಡುವದು ಒಳಿತು.‌ ಇಲ್ಲವಾದಲ್ಲಿ ಸಮಯ‌ ಕಳೆದಂತೆ ಸಂಪರ್ಕಿತರಲ್ಲೂ ಸೋಂಕು ಹೊರಬಿದ್ದರೆ, ಮತ್ತೆ ಅವರು ಹೊಂದಿದ ಸಂಪರ್ಕಿತರನ್ನು ಹುಡುಕುವ ಕೆಲಸವಾಗಬಾರದು ಎಂಬುದೇ ಜನರ ಅಭಿಲಾಷೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button