ಪ್ರಮುಖ ಸುದ್ದಿ
ಬೆಂಗಳೂರಿಗೆ 400+100 ಅಂಬ್ಯುಲೆನ್ಸ್
ಬೆಂಗಳೂರಃ ನಗರದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮರೆಯುತ್ತಿರುವದರಿಂದ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 400 ಅಂಬ್ಯುಲೆನ್ಸ್ ಜೊತೆ ಇನ್ನೂ 100 ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲು ಸಿಎಂ ಯಡಿಯೂರಪ್ಪನವರು ಸೂಚಿಸಿದ್ದಾರೆ ಎಂದು ಸಚಿವ ಸುಧಾಕರ ತಿಳಿಸಿದರು.
ಸಿಎಂ ಜೊತೆ ಮಾತುಕತೆ ನಂತರ ಅವರು ಮಾಧ್ಯಮಕ್ಕೆ ಈ ವಿಷಯ ತಿಳಿಸಿದರು. ಅಲ್ಲದೆ ನಗರದ ಅಂತರರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ ಮಾಡಲಾದ ಸೌಲಭ್ಯಗಳನ್ನು ಗುರುವಾರ ಸಿಎಂ ವೀಕ್ಷಿಸಲಿದ್ದಾರೆ. ಕೋವಿಡ್ ಸೋಂಕಿತರಿಗೆ ಸಮರ್ಪಕ ವ್ಯವಸ್ಥೆ ಮಾಡಲಾಗುತ್ತಿದ್ದು ಯಾರೊಬ್ಬರು ಆತಂಕ ಪಡುವ ಅಗತ್ಯವಿಲ್ಲ ಎಂದರು.