ಪ್ರಮುಖ ಸುದ್ದಿ

ಗ್ರೂಪ್ “ಸಿ” ಹುದ್ದೆಗಳಿಗೆ KPSC ಅರ್ಜಿ ಆಹ್ವಾನ

ಗ್ರೂಪ್ ಸಿ ಹುದ್ದೆಗಳಿಗೆ KPSC ಅರ್ಜಿ ಆಹ್ವಾನ
ಬೆಂಗಳೂರಃ ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್ ‘ಸಿ’ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿ ಆಹ್ವಾನಿದೆ.

ಈ ಕುರಿತು ವೆಬ್ ನಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸೆಪ್ಟೆಂಬರ್ 19 ರೊಳಗೆ ಸಲ್ಲಿಸಲು ಕೋರಲಾಗಿದೆ.

ಶೈಕ್ಷಣಿಕ ಅರ್ಹತೆಃ‌ ಮೆಟ್ರಿಕ್ಯುಲೇಷನ್/ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ, ಪಿಯುಸಿ,‌ ಸರ್ಕಾರದಿಂದ ಮಾನ್ಯತೆ‌ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.
ವಯೋಮಿತಿಃ ಕನಿಷ್ಠ 18, ಗರಿಷ್ಠ 35 ವರ್ಷ,‌ಪ್ರವರ್ಗ – 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ‌ 38 ವರ್ಷಗಳು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ರ‌ ಅಭ್ಯರ್ಥಿಗಳಿಗೆ‌ 40 ವರ್ಷಗಳು.

ಅರ್ಜಿ‌ಶುಲ್ಕಃ ಸಾಮಾನ್ಯ ಅಭ್ಯರ್ಥಿಗಳು 600ರೂ. ಪ್ರವರ್ಗ (2) ಎ, (2) ಬಿ, (3) ಎ, (3) ಬಿ ಅಭ್ಯರ್ಥಿಗಳಿಗೆ 300 ರೂ.ಆದರೆ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಎಸ್ಸಿ/ಎಸ್ಟಿ/ಪ್ರವರ್ಗ-1 ಮತ್ತು ಅಂಗವಿಕಲ‌ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಿದ ನಂತರ ಅರ್ಜಿಯ‌ ಪಕ್ಕದಲ್ಲಿ ‘ಪೇ ನೌ’ ಎಂಬ ಲಿಂಕ್ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಿ ಶುಲ್ಕ ಪಾವತಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ‌ 7406086807/6363754183

Related Articles

Leave a Reply

Your email address will not be published. Required fields are marked *

Back to top button