ನಿಜವಾದ ಕ್ರೀಡಾಪಟುಗಳಿಗೆ ಮನ್ನಣೆ ಸಿಗಲಿ: ಲಕ್ಷ್ಮೀದೇವಿ ಮಡ್ಡಿ
ಶಹಾಪುರ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಯಾದಗಿರಿ, ಶಹಾಪುರ: ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸುವುದರ ಜೊತೆಗೆ ನಿಜವಾದ ಕ್ರೀಡಾ ಪಟುಗಳಿಗೆ ಸೂಕ್ತ ಮನ್ನಣೆ ದೊರೆತಲ್ಲಿ, ಈ ಭಾಗದ ಕ್ರೀಡಾ ಪ್ರತಿಭೆಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗುತ್ತದೆ ಎಂದು ಹಂಗಾಮಿ ತಾಲೂಕ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀದೇವಿ ನಾಗರಾಜ್ ಮಡ್ಡಿ ತಿಳಿಸಿದರು.
ನಗರದ ಹೊರ ವಲಯದ ಡಿಗ್ರಿ ಕಾಲೇಜ್ ಕ್ರೀಡಾಂಗಣದಲ್ಲಿ 2019-20 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಕಲ್ಯಾಣ ಕರ್ನಾಟಕದಾದ್ಯಂತ ಈ ವಿಭಾಗ ಕೀಡಾಪಟುಗಳು ಉತ್ತಮ ಪ್ರತಿಭೆಯೊಂದಿಗೆ ಮಿಂಚಲಿ. ಕ್ರೀಡಾಪಟುಗಳನ್ನು ಸಾಧಕರನ್ನಾಗಿ ಮಾಡುವಲ್ಲಿ ದೈಹಿಕ ಶಿಕ್ಷಕರ ಶ್ರಮ ಅತ್ಯಗತ್ಯವಿದೆ. ಆ ನಿಟ್ಟಿನಲ್ಲಿ ದೈಹಿಕ ಶಿಕ್ಷಕರು ಶ್ರಮವಹಿಸಿ ವಿದ್ಯಾರ್ಥಿಗಲನ್ನು ಸದೃಢರನ್ನಾಗಿಸಬೇಕು. ಉತ್ತಮ ಮಾರ್ಗದರ್ಶನ ಮಾಡಬೇಕು.
ಈ ಭಾಗದ ಕ್ರೀಡಾಳುಗಳು ಮುಂದೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಕಲ್ಯಾಣ ಕರ್ನಾಟಕದ ಹೆಸರು ಅಜರಾಮರವಾಗಿ ಉಳಿಯುವಂತ ಸಾಧನೆ ಮಾಡಲಿ ಎಂದು ಹಾರೈಸಿದರು. ಈ ದಿಸೆಯಲ್ಲಿ ದೈಹಿಕ ಶಿಕ್ಷಕರು ಹೆಚ್ಚು ಪರಿಶ್ರಮ ಹಾಕಬೇಕು ಎಂದು ತಿಳಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ, ಬಿಇಓ ಹೆಚ್.ಎಸ್.ನಾಟೇಕಾರ, ನಿವೃತ್ತ ದೈಶಿ ಸಂಗಣ್ಣ ಕರಿಸಂಗ, ಸುರೇಶ ಮಡ್ಡಿ, ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ್ ವೈದ್ಯ, ಸುಧಾಕರ್ ಗುಡಿ ಸೇರಿದಂತೆ ಸಮಸ್ತ ದೈಹಿಕ ಶಿಕ್ಷಕರ ತಂಡ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ವೀಣಾ, ಭಾಗ್ಯಶ್ರೀ ಪ್ರಾರ್ಥಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ಪ್ರಮಾಣ ವಚನ ಬೋಧಿಸಿದರು ಸೂರ್ಯಕಾಂತ ಕಡಿ ವಂದಿಸಿದರು.